ಮೀಡಿಯಾ ಒನ್‍ಗೆ ಕೇರಳ ಸರಕಾರದ ಟಿಲಿವಿಷನ್ ಪುರಸ್ಕಾರ

0
513

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ರಾಜ್ಯ ಸರಕಾರದ ಟೆಲಿವಿಷನ್ ಪುರಸ್ಕಾರವು ಮೀಡಿಯಾ ಒನ್‌ ಚ್ಯಾನೆಲ್‍ಗೆ ಲಭಿಸಿದೆ. ಈ ಚ್ಯಾನೆಲ್‍ನ ವಿಶೇಷ ಭಾಗಿದಾರರಾದ ಮುಹಮ್ಮದ್ ಅಸ್ಲಮ್ ನಿರಪೇಕ್ಷ ವರದಿಗಳಿಂದ ತನಿಖಾ ಮಾಧ್ಯಮ ಪತ್ರಕರ್ತ ಪುರಸ್ಕಾರಕ್ಕೆ ಭಾಜನರಾದರು. ಮುಂದುವರಿದ ವಿಭಾಗದ ಮೀಸಲಾತಿಯ ಕುರಿತ ಅವರ ವರದಿ ಪ್ರಶಸ್ತಿ ಗೆದ್ದುಕೊಂಡಿದೆ.

ಅವರಿಗೆ ಫಲಕ 10,000ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಸಿಗಲಿದ್ದು ಕೇರಳ ಸಚಿವ ಸಿಜಿ ಚೆರಿಯನ್ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದ್ದಾರೆ. ಲಾಕ್‍ಡೌನ್ ಕಾಲದಲ್ಲಿ ತನಿಖಾ ವರದಿಗೆ ಪತ್ರಕರ್ತರು ಹೊರಗಿಳಿಯಲು ಸಾಧ್ಯವಿಲ್ಲದ ಕಾಲದಲ್ಲಿ ಮುಂದುವರಿದ ಮೀಸಲಾತಿ ಜಾರಿಗೆ ತಂದಾಗ ಎಂಬಿಬಿಎಸ್ ಕೋರ್ಸಿನ ಸೀಟು ಹಂಚಿಕೆಯಲ್ಲಾದ ನ್ಯೂನತೆಯನ್ನು ಕಂಡು ಹುಡುಕಿ ಅವರು ವರದಿ ಮಾಡಿದ್ದರು. ಇದು ಅವರನ್ನು ಪ್ರಶಸ್ತಿಗೆ ಅರ್ಹಗೊಳಿಸಿದೆ. ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸತ್ಯಾಂಶಗಳನ್ನು ಹೊರತಂದಿದ್ದಾರೆ ಎಂದು ಪ್ರಶಸ್ತಿ ಪ್ರದಾನ ಸಮಿತಿ ಹೇಳಿದೆ.