ಮಹಾರಾಷ್ಟ್ರ: ನ್ಯೂಸ್ ಪೇಪರ್‌ಗಳಲ್ಲಿ ಆಹಾರ ವಸ್ತುಗಳ ವಿತರಣೆಗೆ ನಿಷೇಧ

0
276

ಸನ್ಮಾರ್ಗ ವಾರ್ತೆ

ಮುಂಬೈ: ಆಹಾರ ವಸ್ತುಗಳನ್ನು ನ್ಯೂಸ್ ಪೇಪರ್ ಗಳಲ್ಲಿ ಕಟ್ಟಿ ಕೊಡುವುದಕ್ಕೆ ಮಹಾರಾಷ್ಟ್ರದಲ್ಲಿ ನಿಷೇಧ ವಿಧಿಸಲಾಗಿದೆ. ಮಹಾರಾಷ್ಟ್ರ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ತ್ರೇಶನ್ ಈ ನಿಷೇಧವನ್ನು ವಿಧಿಸಿದೆ.

ನ್ಯೂಸ್ ಪೇಪರ್‌ಗಳು ಉಪಯೋಗಿಸುವ ಷಾಯಿಯು ಆರೋಗ್ಯಕ್ಕೆ ಹಾನಿಕರವಾಗಬಲ್ಲುದು ಎಂಬುದು ಸಂಶೋಧನೆಯಿಂದ ತಿಳಿದು ಬಂದಿರುವುದಾಗಿ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಠಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅದು ಹೇಳಿಕೊಂಡಿದೆ.

ವಡಾ ಪಾವ್, ಪೋಹ ಸಿಹಿ ತಿಂಡಿಗಳು ಬೇಲ್ ಮುಂತಾದವುಗಳನ್ನು ನ್ಯೂಸ್ ಪೇಪರ್‌ಗಳಲ್ಲಿ ಕಟ್ಟಿ ಕೊಡುವುದು ಮಹಾರಾಷ್ಟ್ರದಲ್ಲಿ ಸಾಮಾನ್ಯವಾಗಿದೆ. ಬಿಸಿ ಬಿಸಿ ಇರುವಾಗ ನ್ಯೂಸ್ ಪೇಪರ್‌ನಲ್ಲಿ ಅದನ್ನು ಕಟ್ಟಿಕೊಡುವುದು ಆರೋಗ್ಯಕ್ಕೆ ಹಾನಿಕರವಾಗಲಿದೆ ಎಂದು ಅದು ಹೇಳಿದೆ.