ದಿಲ್ಲಿಯ ರಸ್ತೆಗೆ ನಟ ಸುಶಾಂತ್ ಸಿಂಗ್ ರಾಜಪೂತ್ ಹೆಸರು

0
302

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಆಂಡ್ರೂಸ್ ಗಂಜ್‍ನ ರಸ್ತೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಹೆಸರನ್ನು ಇರಿಸಲು ನಗರಸಭೆ ಅಂಗೀಕರಿಸಿದೆ ಎಂಬುದಾಗಿ ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸುಶಾಂತ್‍ರ 35ನೇ ಹುಟ್ಟುಹಬ್ಬವಾಗಿತ್ತು. 2020 ಜೂನ್ 14ಕ್ಕೆ ಸುಶಾಂತ್ ಬಾಂದ್ರಾದ ಫ್ಲ್ಯಾಟ್‍ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸುಶಾಂತ್‍ರ ಗೌರವ ಸೂಚಕವಾಗಿ ರಸ್ತೆಯ ಹೆಸರು ಬದಲಾಯಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕಳೆದ ಸೆಪ್ಟಂಬರ್‌ನಲ್ಲಿ ಕಾಂಗ್ರೆಸ್ ಕೌನ್ಸಿಲರ್ ಅಭಿಷೇಕ್ ದತ್ತ್ ರಸ್ತೆಗೆ ಸುಶಾಂತ್ ಹೆಸರಿಡುವ ಕುರಿತು ಸಲಹೆ ನೀಡಿದ್ದರು. ನಿನ್ನೆಯ ಸಭೆಯಲ್ಲಿ ಹೆಸರು ಬದಲಾಯಿಸುವ ತೀರ್ಮಾನ ನಡೆದಿದೆ. ಆಂಡ್ರೂಸ್ ಗಂಜ್‍ರಸ್ತೆ ಎಂಟಕ್ಕೆ ಸುಶಾಂತ್ ಸಿಂಗ್ ರಾಜಪೂತ್ ಮಾರ್ಗ್ ಎಂಬ ಹೆಸರು ಬರಲಿದೆ.