ಸುಡಾನ್: ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಪಾರ್ಟಿ ಮುಖ್ಯಸ್ಥನಿಗೆ ಅಧಿಕಾರ ವಹಿಸಿದ ಅಧ್ಯಕ್ಷ ಉಮರುಲ್ ಬಶೀರ್

0
1476

ಖಾರ್ತೂಮ್,ಮಾ.2: ಸುಡಾನಿನ ಅಧ್ಯಕ್ಷ ಉಮರುಲ್ ಬಶೀರ್ ಅವರು ಅಧಿಕಾರವನ್ನು ಆಡಳಿತ ಪಕ್ಷದ ಮುಖ್ಯಸ್ಥನಿಗೆ ವಹಿಸಿಕೊಟ್ಟಿದ್ದಾರೆ. ಸುಡಾನ್ ಕಾಂಗ್ರೆಸ್ ಪಾರ್ಟಿಯ ಕಾರ್ಯಾಧ್ಯಕ್ಷ ಅಹ್ಮದ್ ಹಾರೂನ್‍ರನ್ನು ಉಪ ಮುಖ್ಯಸ್ಥನನ್ನಾಗಿ ನೇಮಿಸಿದ್ದಾರೆ. ಹಲವು ವಾರಗಳಿಂದ ಬಶೀರ್‍ ರ ಆಡಳಿತದ ವಿರುದ್ಧ ಸುಡಾನಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸುಡಾನಿನಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿಯನ್ನು ಬಶೀರ್ ಕಳೆದವಾರ ಘೋಷಿಸಿ ಸರಕಾರವನ್ನು ವಿಸರ್ಜಿಸಿದ್ದರು. ಕಳೆದ ವರ್ಷ ಡಿಸೆಂಬರಿನಿಂದ ಸುಡಾನ್‍ನಲ್ಲಿ ಜನರು ಬೀದಿಗಳಿದು ಬಶೀರ್ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಪೊಲೀಸರೊಂದಿಗೆ ಘರ್ಷಣೆಯಲ್ಲಿ ಹಲವರು ಮೃತಪಟ್ಟಿದ್ದರು.

ಆಡಳಿತರೂಢ ಪಾರ್ಟಿಯ ಮುಖ್ಯಸ್ಥ ಅಹ್ಮದ್ ಹಾರೂನರಿಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಾರ್ಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಾರೂನ್ ಸುಡಾನ್ ಕಾಂಗ್ರೆಸ್ ಪಾರ್ಟಿಯ ಕಾರ್ಯಾಧ್ಯಕ್ಷರಾಗಿ ಪಾರ್ಟಿಯ ಮುಂದಿನ ಸಭೆಯಲ್ಲಿ ಆಯ್ಕೆ ಆಗಲಿದ್ದು, ಪಾರ್ಟಿಯ ಹೊಸ ಅಧ್ಯಕ್ಷನನ್ನೂ ಕೂಡಾ ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಪಾರ್ಟಿ ತಿಳಿಸಿದೆ. ಈ ಬದಲಾವಣೆಯನ್ನು ಶುಕ್ರವಾರ ಘೋಷಿಸಲಾಗಿದ್ದು ತಾನು ಎಲ್ಲ ಪಾರ್ಟಿಗಳ ಕುರಿತು ತಟಸ್ಥ ನಿಲುವು ಸ್ವೀಕರಿಸುತ್ತೇನೆ ಎಂದು ಬಶೀರ್ ಹೇಳಿದರು. ಆದರೆ ಎನ್‍ಸಿಪಿಯ ಮುಖ್ಯಸ್ಥನ ಸ್ಥಾನ ತೊರೆಯುವ ಸುಳಿವನ್ನು ಅವರು ನೀಡಿಲ್ಲ. ಆದರೆ ಎನ್ಸಿಪಿಯ ಹೇಳಿಕೆ ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ. ಇನ್ನು ಮುಂದೆ ಬಶೀರ್‍ ಪಾರ್ಟಿಯ ಉಪ ಮುಖ್ಯಸ್ಥರಾದ ಹಾರೂನ್‍ರು ಪ್ರತಿಭಟನಾಕಾರರನ್ನು ನಿಭಾಯಿಸಬೇಕಾಗಿದೆ. ಬಶೀರ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕ ಬಶೀರ್ ದೇಶದ ಸರಕಾರ, ಪ್ರಾಂತೀಯ ಸರಕಾರಗಳನ್ನು ವಿಸರ್ಜಿಸಿದ್ದರು. ಹದಿನೆಂಟು ರಾಜ್ಯಪಾಲರನ್ನು ವಜಾಗೊಳಿಸಿ ಅಲ್ಲಿಗೆ ಸೇನೆಯ 16 ಅಧಿಕಾರಿಗಳು ಮತ್ತು ಇಬ್ಬರು ಇಂಟೆಲಿಜೆನ್ಸ್ ಅಧಿಕಾರಿಗಳನ್ನು ನೇಮಕಗೊಳಿಸಿದ್ದರು.