ಸುಳ್ಯದಲ್ಲೊಂದು ಜರ್ಮನ್ ಶೈಲಿಯ ಮಸೀದಿ: ನಾಳೆ ಮಸ್ಜಿದ್ ಹಾಜಿರಾ ಹಸನ್, ಸುಳ್ಯ ಕಮ್ಯುನಿಟಿ ಸೆಂಟರ್ ಉದ್ಘಾಟನೆ

0
666

ಸನ್ಮಾರ್ಗ ವಾರ್ತೆ

ಸುಳ್ಯ: ನಾವು ಸಾಧಾರಣವಾಗಿ ಮಸೀದಿ ಕಟ್ಟಡಗಳನ್ನು ಎಲ್ಲೆಡೆ ನೋಡುತ್ತೇವೆ. ಮಿನಾರ, ಒಳಾಂಗಣದ ವೈಶಿಷ್ಟ್ಯತೆಗಳನ್ನೂ ಕಾಣುತ್ತೇವೆ. ಆದರೆ ಸುಳ್ಯದಲ್ಲೊಂದು ವಿಶಿಷ್ಟ ಆಕಾರದ ಮಸೀದಿಯೊಂದು ತಲೆ ಎತ್ತಿ ನಿಂತಿದೆ. ಅದುವೇ “ಮಸ್ಜಿದ್ ಹಾಜಿರಾ ಹಸನ್” ಮತ್ತು “ಸುಳ್ಯ ಕಮ್ಯುನಿಟಿ ಸೆಂಟರ್”.

ಇದನ್ನು ಬಹಳಷ್ಟು ಅಂದವಾಗಿ, ಆಕರ್ಷಕ ಮತ್ತು ವೈಶಿಷ್ಟ್ಯಪೂರ್ಣವಾಗಿ ಜರ್ಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಉದ್ಘಾಟನೆಯು ನಾಳೆ(ಫೆಬ್ರವರಿ 12) ನಡೆಯಲಿದೆ.

ಮಸೀದಿಯು ಸೌದಿ ಅರೇಬಿಯಾದ ಅಲ್ ಖೋಬರ್‌ನಲ್ಲಿ ಉದ್ಯಮಿಯಾಗಿರುವ ಯೂನುಸ್ ಹಸನ್ ಅವರು ತನ್ನ ತಾಯಿ ಹಾಜಿರಾ ಹಸನ್ ಅವರ ಹೆಸರಲ್ಲಿ ಕೊಡುಗೆಯಾಗಿ ನೀಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ
ಸುಳ್ಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್(ಎಸ್‌ಇಸಿಟಿ) ವತಿಯಿಂದ ಹಾಜಿರಾ ಹಸನ್ ಮಸೀದಿ ಮತ್ತು ಸುಳ್ಯ ಕಮ್ಯುನಿಟಿ ಸೆಂಟರ್‌ನ ಉದ್ಘಾಟನಾ ಸಮಾರಂಭವು ಫೆ.12ರ ಭಾನುವಾರ ಬೆಳಗ್ಗೆ 09:30ಕ್ಕೆ ನಡೆಯಲಿದೆ.

ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ ಉಪಸ್ಥಿತಿಯಲ್ಲಿ ಮಸೀದಿ ಮತ್ತು ಕಮ್ಯುನಿಟಿ ಸೆಂಟರ್‌ ಅನ್ನು ರವಿವಾರ ಬೆಳಗ್ಗೆ 9:30ಕ್ಕೆ ಅಲ್ ಖೋಬರ್‌ನ ವಾಣಿಜ್ಯೋದ್ಯಮಿ ಮತ್ತು ಟೀಮ್ ಬಿ-ಹ್ಯೂಮನ್‌ ಟ್ರಸ್ಟಿ ಮುಹಮ್ಮದ್ ಯೂನುಸ್ ಹಸನ್ ಉದ್ಘಾಟಿಸುವರು.

ಮುಖ್ಯ ಭಾಷಣಕಾರರಾಗಿ ಮಂಗಳೂರಿನ ಕಚ್ಚಿ ಮೆಮನ್ ಮಸೀದಿ ಖತೀಬ್ ಮೌಲಾನಾ ಶುಐಬ್ ಹುಸೈನಿ ನದ್ವಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ವೇಳಂ ಶಾಂತಿ ನಗರ ಜುಮಾ ಮಸೀದಿಯ ಖತೀಬರಾದ ಹುಸೈನ್ ಕಾಮಿಲ್ ಸಖಾಫಿ, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿ ಭಾಗವಹಿಸಲಿದ್ದಾರೆ.

ಸಚಿವ ಹಾಗೂ ಸುಳ್ಯ ಶಾಸಕ ಎಸ್‌.ಅಂಗಾರ, ಶಾಸಕ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌, ಸೌದಿ ಅರೇಬಿಯಾದ ಅಲ್ ಮುಝೈನ್ ಮಾಲೀಕ ಮತ್ತು ಹಿದಾಯ ಫೌಂಡೇಶನ್‌ ಟ್ರಸ್ಟಿ ಝಕರಿಯಾ ಜೋಕಟ್ಟೆ, ಟೀಮ್ ಬಿ-ಹ್ಯೂಮನ್‌ ಟ್ರಸ್ಟಿ ಹಾಗೂ ವೈಟ್ ಸ್ಟೋನ್ ಗ್ರೂಪ್‌ನ ಎಂ.ಶರೀಫ್ ಬೋಳಾರ್, ಸುಳ್ಯ ಪ.ಪಂ ಅಧ್ಯಕ್ಷ ವಿನಯ್‌ ಕುಮಾರ್ ಕಂದಡ್ಕ, ಜೆಡಿಎಸ್‌ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಜೆ 4:30ರಿಂದ 6:30ರ ತನಕ ಸಾಮುದಾಯಿಕ ಸಭೆ ನಡೆಯಲಿದೆ.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹನೀಫ್ ಗೋಳ್ತಮಜಲು, ಸುಳ್ಯ ಪ.ಪಂ. ಸದಸ್ಯರಾದ ರಿಯಾಝ್ ಕಟ್ಟೆಕಾರ್, ಸುಶೀಲಾ ಚನ್ನಪ್ಪ, ಶರೀಫ್, ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಯ ಎಂ.ಡಿ. ಶೇಕ್ ಕರ್ನಿರೆ, ಆಝಾದ್ ಗ್ರೂಪ್‌ನ ಎಂ.ಡಿ. ಮತ್ತು ಹಿದಾಯ ಫೌಂಡೇಶನ್ ಅಧ್ಯಕ್ಷ ಮನ್ಸೂರ್ ಆಝಾದ್, ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಬಾವಾ ಗ್ರೂಪ್‌ನ ರಿಯಾಝ್ ಬಾವ, ತರೀಕೆರೆ ಪುರಸಭೆಯ ಮಾಜಿ ಅಧ್ಯಕ್ಷ ಎಚ್.ಯು.ಫಾರೂಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಶಾಹುಲ್ ಹಮೀದ್‌ ಉಜಿರೆ, ಹನೀಫ್ ಗೊಳ್ತಮಜಲ್, ಮುಹಮ್ಮದ್‌ ಬಶೀರ್, ಇಬ್ರಾಹೀಂ ಬೈಕಂಪಾಡಿ, ಕೆ.ಅಹ್ಮದ್ ಬಾವ, ಇಬ್ರಾಹೀಂ ಎಂ. ಹುಸೈನ್‌, ಮುಹಮ್ಮದ್ ವಝೀರ್, ಸಲ್ಮಾನ್ ನೂರ್ ಹಸನ್, ಎಚ್‌.ಕೆ.ಕಾಸಿಂ ಅಹ್ಮದ್‌, ಶೌಕತ್ ಸೂರಿ, ಅಶ್ರಫ್ ಅಬ್ದುಲ್ ಹಮೀದ್, ಡಾ.ಅಬ್ದುಲ್ ಮಜೀದ್‌ ಯು, ಎಸ್.ಇ.ಮುಹಮ್ಮದ್ ಕುಂಞಿ, ಮುಹಮ್ಮದ್ ಅಲಿ, ಇಬ್ರಾಹೀಂ ಗೂನಡ್ಕ, ಅಬ್ದುಲ್ಲಾ ಪಿ.ಎಂ., ಅಬ್ಬಾಸ್ ಬಿ., ಡಾ.ಉಮರ್ ಬೀಜದಕಟ್ಟೆ, ಕೆ.ಎಂ.ಶರೀಫ್‌, ಅಬ್ದುಸ್ಸಲಾಂ ಯು, ಆಸಿಫ್ ಡೀಲ್ಸ್, ಅಬ್ದುಲ್ ನಾಸಿರ್ ಲಕ್ಕೀಸ್ಟಾರ್, ಹಾರಿಸ್ ಮುಕ್ಕ, ಎಸ್.ಇ.ಮುಹಮ್ಮದ್‌ ಕೊಯಿನಾಡ್, ಮುಹಮ್ಮದಲಿ ತಾಮರಶ್ಶೇರಿ ಸುಳ್ಯ, ಅಬ್ದುಲ್ಲಾ ಪಿ.ಎಂ ಸುಳ್ಯ, ಅಬ್ಬಾಸ್ ಬಿ ಸುಳ್ಯ, ಮುಹಮ್ಮದ್ ನೂರುಲ್ಲಾ, ಅಬ್ದುಲ್‌ ಜಲೀಲ್ ಇಂಜಿನಿಯ‌ರ್ ಮಂಗಳೂರು, ಮುಹಮ್ಮದ್ ಇಂಜಿನಿಯರ್ ಬೆಳ್ಳಾರೆ, ಅಬ್ದುಸ್ಸಲಾಮ್ ಯು. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ತಿಳಿಸಿದೆ.

ಹಾಜಿರಾ ಹಸನ್‌ ಮಸೀದಿಯ ವಿನ್ಯಾಸ ಹಾಗೂ ನಿರ್ಮಾಣ ಕಾಮಗಾರಿಯು ಆಸಿಫ್ ಡೀಲ್ಸ್ ಉಸ್ತುವಾರಿಯಲ್ಲಿ ಪೂರ್ಣಗೊಂಡಿದ್ದು, ಇಲ್ಲಿ ಕಮ್ಯೂನಿಟಿ ಸೆಂಟರ್ ಮತ್ತು ನಾಗರಿಕ ಸೇವಾ ಕೇಂದ್ರ, ಫ್ಯಾಮಿಲಿ ಕೌನ್ಸೆಲಿಂಗ್‌ ಸೆಂಟರ್, ಅರೇಬಿಕ್ ಸ್ಕೂಲ್ ಕಾರ್ಯಾಚರಿಸಲಿದೆ ಎಂದು ವರದಿಯಾಗಿದೆ‌.

ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ಕಮ್ಯೂನಿಟಿ ಸೆಂಟರ್ ಮೂಲಕ ನಡೆಸಲಾಗುವುದು ಎಂದು ಸುಳ್ಯ ಎಜುಕೇಶನಲ್ ಮತ್ತು ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಇಬ್ರಾಹೀಂ ಹಾಗೂ ಎಸ್ ಎಂ ಉಸ್ಮಾನ್ ತಿಳಿಸಿದ್ದಾರೆ.