ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ. 18: ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಆಲಿಕೆಯನ್ನು ಅಕ್ಬೋಬರ್ ಹದಿನೆಂಟರೊಳಗೆ ಪೂರ್ಣಗೊಳ್ಳಬೇಕು ಎಂದು ಸುಪ್ರೀಂಕೋರ್ಟು ತಿಳಿಸಿದೆ.
ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಈ ಸೂಚನೆ ನೀಡಿದ್ದು ವಾದ ಮುಂದುವರಿಯುವಾಗ ಸಮಾಂತರವಾಗಿ ಮಧ್ಯಸ್ಥಿಕೆ ಯತ್ನಗಳನ್ನು ನಡೆಸಲು ಕೂಡ ಸುಪ್ರೀಂಕೋರ್ಟು ಅನುಮತಿ ನೀಡಿತು. ವಾದ ಆಲಿಕೆ ಪೂರ್ತಿಗೆ ಅಗತ್ಯವೆನ್ನಿಸಿದರೆ ಶನಿವಾರ ಹೆಚ್ಚುವರಿ ಸಮಯದಲ್ಲಿ ಕೋರ್ಟು ಕಲಾಪ ನಡೆಸಲಿದೆ ಎಂದು ಗೊಗೊಯಿ ತಿಳಿಸಿದರು.
ಪ್ರಕರಣದಲ್ಲಿ ಈ ತಿಂಗಳ ಕೊನೆಯಲ್ಲಿ ವಾದ ಪೂರ್ತಿಗೊಳಿಸಲು ಸಾಧ್ಯವಿದೆ ಎಂದು ಸುನ್ನಿ ವಕ್ಫ್ ಬೋರ್ಡು ವಕೀಲ ರಾಜೀವ್ ಧವನ್ ಹೇಳಿದರು. ಎರಡು ದಿವಸದಲ್ಲಿ ವಾದ ಪೂರ್ತಿ ಮಾಡಬಹುದು ಆದರೆ ಇತರ ಕಕ್ಷಿಗಳ ವಾದ ಉದ್ದಕ್ಕೆ ಹೋದರೆ ಇದಕ್ಕೆ ಉತ್ತರಿಸಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ರಾಮಲಲ್ಲ ವಕೀಲರು ಕೋರ್ಟಿಗೆ ತಿಳಿಸಿದರು. ಈ ಆಧಾರದಲ್ಲಿ ವಾದ ಪೂರ್ತಿಗೊಳಿಸುವುದಕ್ಕೆ ಕೋರ್ಟು ಅಂತಿಮ ಸಮಯ ನಿಗದಿಗೊಳಿಸಿತು.
ಬಾಬರಿ ಮಸೀದಿ ಇದ್ದ ಎರಡು ಎಕರೆ 73 ಸೆಂಟ್ಸ್ ಸುನ್ನಿ ವಕ್ಫ್ ಬೋರ್ಡು ಮತ್ತು ನಿರ್ಮೋಹಿ ಅಖಾಡ, ರಾಮಲಲ್ಲಾಕ್ಕೆ ಹಂಚಿಕೊಡಬೇಕೆಂದು ಆಲಾಹಾಬಾದ್ ಹೈಕೋಟು ತೀರ್ಪಿನ ವಿರುದ್ಧ ಅರ್ಜಿಯನ್ನು ಸುಪ್ರೀಂಕೋರ್ಟು ಪರಿಗಣಿಸುತ್ತಿದೆ.












