40 ಮಹಡಿಯ ಅವಳಿ ಕಟ್ಟಡಗಳನ್ನು ಕೆಡವಲು ಆದೇಶಿಸಿದ ಸುಪ್ರೀಂಕೋರ್ಟ್

0
665

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರ ಪ್ರದೇಶದ ನೋಯಿಡದ ಅನಧಿಕೃತವಾಗಿ ಕಟ್ಟಿದ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟು ಆದೇಶಿಸಿದೆ. 40 ಮಹಡಿಯ ಅವಳಿ ಫ್ಲಾಟ್ ಸುಪ್ರೀಂ ಕೋರ್ಟಿನ ಆದೇಶ ಪ್ರಕಾರ ತೆರವುಗೊಳಿಸಬೇಕಾಗುತ್ತದೆ. ಈ ತೀರ್ಪನ್ನು ಜಸ್ಟಿಸ್ ಡಿ.ವೈ ಚಂದ್ರಚೂಡ ಮತ್ತು ಎಂ ಆರ್ ಶಾರ ಪೀಠ ನೀಡಿದೆ. ನೊಯಿಡದಲ್ಲಿ ಒತ್ತುವರಿ ಮಾಡಿಕೊಂಡು ನೊಯಿಡ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಟ್ಟಡ ಕಟ್ಟಿಸುವ ಕಂಪೆನಿ ಸೂಪರ್ ಟೆಕ್ ಈ ಬಿಲ್ಡಿಂಗ್ ಕಟ್ಟಿದೆ. ಈ ಕಟ್ಟಡದಿಂದ ಪ್ಲಾಟ್ ಖರೀದಿಸಿದವರಿಗೆ ಅವರ ಹಣವನ್ನು ಎರಡು ತಿಂಗಳೊಳಗೆ ಮರಳಿಸಬೇಕು. ಫ್ಲಾಟ್ ಸಮುಚ್ಚಯ ಕೆಡಹುವ ವೆಚ್ಚವನ್ನೂ ಕಂಪೆನಿ ಭರಿಸಬೇಕೆಂದು ಕೋರ್ಟು ಆದೇಶಿಸಿದೆ.

ಕೇರಳದಲ್ಲಿ ಕೂಡ ಇಂತಹ ಫ್ಲಾಟ್ ಸಮುಚ್ಚಯವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟು ಆದೇಶಿಸಿತ್ತು. ಕೊಚ್ಚಿಯಲ್ಲಿ ಅಕ್ರಮವಾಗಿ ಮೈದಾನಕ್ಕೆ ಸೇರಿದ ಸ್ಥಳದಲ್ಲಿ ನಿರ್ಮಿಸಲಾದ ನಾಲ್ಕು ಪ್ಲ್ಯಾಟ್ ಸಮುಚ್ಚಯಗಳನ್ನು ತೆರವುಗೊಳಿಸಲಾಗಿತ್ತು.