ತಾಜ್ ಸೈಕಲ್ಸ್ ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ; ಅಝರ್ ಬೈಜಾನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

0
670

ಸನ್ಮಾರ್ಗ ವಾರ್ತೆ

ಬೆಂಗಳೂರು: ಅಝರ್ ಬೈಜಾನ್ ದೇಶದ ರಾಜಧಾನಿ ಬಾಕುವಿನಲ್ಲಿ ನಡೆದ ದೇಶದ ಪ್ರತಿಷ್ಠಿತ ಎವೊನ್ ಸೈಕಲ್ಸ್ ಲಿ. ಕಂಪೆನಿಯ ವಿಐಪಿ ಡೀಲರ್ಸ್ ಗಳ ಸಮಾವೇಶದಲ್ಲಿ ಮಂಗಳೂರಿನ ಖ್ಯಾತ ಸೈಕಲ್ ಮಾರಾಟ ಸಂಸ್ಥೆ ತಾಜ್ ಸೈಕಲ್ಸ್ ಕಂಪೆನಿ ಕರ್ನಾಟಕದ ಡೀಲರ್ ಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ.

ಎವೊನ್ ಸೈಕಲ್ಸ್ ಲಿ. ನ ಆಡಳಿತ ನಿರ್ದೇಶಕ ರಿಷಿ ಪಹ್ವಾ, ಉಪಾಧ್ಯಕ್ಷ ಬಿ.ಡಿ ಕಪೂರ್ ಹಾಗು ಜನರಲ್ ಮ್ಯಾನೇಜರ್ ಸುಲೇಖ್ ಅವರು ತಾಜ್ ಸೈಕಲ್ಸ್ ನ ಮುತ್ತಲಿಬ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮುತ್ತಲಿಬ್ ಅವರ ಪತ್ನಿ, ಸಾಹಿತಿ, ಅನುಪಮ ಮಹಿಳಾ ಮಾಸಿಕ ಸಂಪಾದಕ ಎಂ. ಶಹನಾಝ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here