ಸನ್ಮಾರ್ಗ ವಾರ್ತೆ
ಕೇರಳ, ಜ. 17: ಶಾಲಾ ವಿದ್ಯಾರ್ಥಿನಿಯರೊಡನೆ ಪಾಕಿಸ್ತಾನಕ್ಕೆ ಹೋಗಲು ಸಜ್ಜಾಗಿ ಎಂದ ಕೊಡುಂಗಲ್ಲೂರ್ ಸರಕಾರಿ ಗರ್ಲ್ಸ್ ಹೈಸ್ಕೂಲ್ ಅಧ್ಯಾಪಕನನ್ನು ಅಮಾನತಿನಲ್ಲಿರಿಸಲಾಗಿದೆ. ಧಾರ್ಮಿಕ ಪ್ರಚೋದನೆ ಉಂಟುಮಾಡುವ ರೀತಿಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಧ್ಯಾಪಕ ಕೆ ಕೆ ಕಲೇಶನ್ ಮಾತಾಡಿದ್ದರು. ಪತ್ರಿಕಾ ವರದಿಗಳ ಆಧಾರದಲ್ಲಿ ಅಧ್ಯಾಪಕನನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಜಿಲ್ಲಾ ವಿದ್ಯಾಭ್ಯಾಸ ಉಪ ನಿರ್ದೇಶಕರು ತಿಳೀಸಿದರು. ಹಿಂದಿ ಭಾಷೆ ಕಲಿಸುವ ವೇಳೆ ಪಠ್ಯ ವಿಷಯವಲ್ಲದ ಬಯೋಲಜಿ ಸಮಾಜ ಶಾಸ್ತ್ರ ಕ್ಲಾಸು ತೆಗೆದುಕೊಂಡು ಪೌರತ್ವ ತಿದ್ದುಪಡಿ ಕಾನೂನಿನ ನೆಪದಲ್ಲಿ ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ಹೋಗಲು ಸಿದ್ಧರಾಗಿ ಎಂದು ಹೇಳಿದ್ದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ ಎಂದು ವರದಿ ತಿಳಿಸಿದೆ.
ಅಧ್ಯಾಪಕನ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿ ಎಸ್ಎಫ್ಐ, ಎಂಎಸ್ಎಫ್, ಕೆಎಸ್ಯು ಸ೦ಘಟನೆಗಳು ಶಾಲೆಯ ಮುಂದೆ ಪ್ರತಿಭಟಿಸಿವೆ. ಕೊಡುಂಗಲ್ಲೂರ್ ನಗರಸಭಾ ಅಧ್ಯಕ್ಷ ಕೆ.ಆರ್ ಜೈತ್ರರೂ ಶಾಲೆಗೆ ಬಂದು ಅದ್ಯಾಪಕನ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿದ್ದಾರೆ. ಸಿಪಿಎಂ, ಕಾಂಗ್ರೆಸ್, ಮುಸ್ಲಿಂಲೀಗ್ ನಾಯಕರು ಶಾಲೆಗೆ ಬಂದಿದ್ದರು. ಎಸ್ಎಫ್ಐ, ಎಂಎಸ್ಎಫ್ ಸದಸ್ಯರು ಅಧ್ಯಾಪಕನ ವಿರುದ್ಧ ಕೊಡುಂಗಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಅಧ್ಯಾಪಕನ ವಿರುದ್ಧ ವಿದ್ಯಾರ್ಥಿಗಳ ವಿರುದ್ಧ ಕೆಟ್ಟದಾಗಿ ವರ್ತಿಸಿದ ದೂರಿತ್ತು. ಇದಕ್ಕೆ ಸಂಬಂಧಪಟ್ಟು ಚೈಲ್ಡ್ ಲೈನ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ದೂರು ಬಂದಿತ್ತು. ಈಗ ಈತ ವಿದ್ಯಾರ್ಥಿಗಳನ್ನು ಪಾಕಿಸ್ತಾನಕ್ಕೆ ಹೋಗಲು ಸಿದ್ಧರಿರಿ ಎಂದಿದ್ದಾನೆ. ತನಿಖೆಗೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣಾಧಿಕಾರಿ ಎನ್ ಗೀತಾ ಅವರು ಮಕ್ಕಳು ಮತ್ತು ಅಧ್ಯಾಪಕರ ಹೇಳಿಕೆ ಪಡೆದುಕೊಂಡಿದ್ದಾರೆ. ಶಾಲೆಯ ಪಿಟಿಎಯ ಸಭೆಯಲ್ಲಿ ಅವರು ಭಾಗವಹಿಸಿದರು. ಸಭೆಯಲ್ಲಿ ಪೋಷಕರು ಅಧ್ಯಾಪಕನ ವಿರುದ್ಧ ದೂರು ನೀಡಿದ್ದು ಕ್ರಮ ಜರಗಿಸಲು ಆಗ್ರಹಿಸಿದ್ದಾರೆ.












