ಭಾರತದಿಂದ ನೇರವಾಗಿ ಸೌದಿಗೆ ಪ್ರಯಾಣಿಸುವವರಿಗೆ ಕೊರೋನಾ ವ್ಯಾಕ್ಸಿನ್ ಕಡ್ಡಾಯವಲ್ಲ

0
84

ಸನ್ಮಾರ್ಗ ವಾರ್ತೆ

ಭಾರತದಿಂದ ನೇರವಾಗಿ ಸೌದಿಗೆ ಪ್ರಯಾಣಿಸುವವರಿಗೆ ಕೊರೋನಾ ವ್ಯಾಕ್ಸಿನ್ ಕಡ್ಡಾಯವಲ್ಲ. ಭಾರತದಿಂದ ಕೊರೋನಾ ವ್ಯಾಕ್ಸಿನ್‌ನ ಒಂದು ಡೋಸ್ ಅಥವಾ ಎರಡೂ ಡೋಸ್ ಪಡೆದವರು ಮತ್ತು ಒಂದೇ ಒಂದು ಡೋಸ್ ಪಡೆಯದವರಿಗೂ ಸೌದಿ ಪ್ರವೇಶಿಸಬಹುದಾಗಿದ್ದು ಸೌದಿಗೆ ತಲುಪಿದ ಬಳಿಕ ಐದು ದಿವಸಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ.

ಈಗಾಗಲೇ ಸೌದಿಯಿಂದ ಎರಡು ಡೋಸ್ ಲಸಿಕೆ ಪಡೆದವರಿಗೆ ಮತ್ತು ಈ ಮೊದಲೇ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಿಂದ ರಿಯಾಯಿತಿ ನೀಡಿದವರಿಗೆ ಮಾತ್ರವೇ ಕ್ವಾರಂಟೈನ್ ನಿಯಮಗಳು ಅನ್ವಯಿಸುವುದಿಲ್ಲ.

ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿರುವವರು ತಾವು ಪ್ರಯಾಣ ಮಾಡುವ ವಿಮಾನ ಕಂಪೆನಿಯ ಅಧೀನದಲ್ಲಿರುವ ಹೋಟೆಲಿನಲ್ಲಿ ಅಥವಾ ಸೌದಿಯಲ್ಲಿ ಕ್ವಾರಂಟೈನ್ ಗಾಗಿ ಅಂಗೀಕರಿಸಲಾದ ಹೋಟೆಲ್‌ನಲ್ಲಿ ಐದು ದಿವಸಗಳಿಗೆ ಮುಂಚಿತವಾಗಿ ಬುಕ್ ಮಾಡಬೇಕಾಗಿದೆ.

ಅಲ್ಲದೆ ಇವರು ಸೌದಿಗೆ ತಲುಪಿ 24 ಗಂಟೆಗಳ ಒಳಗಡೆ ಮತ್ತು 5ನೇ ದಿವಸ ಕೊರೋನ ಪಿಸಿಆರ್ ಪರೀಕ್ಷೆ ನಡೆಸಬೇಕಾಗಿದೆ.

ಆದರೆ ಸೌದಿಯಿಂದ ವ್ಯಾಕ್ಸಿನ್ ಪಡೆದವರಲ್ಲಿ ತಮ್ಮ ತವಕ್ಕಲ್ ಅಪ್ಲಿಕೇಶನ್ನಲ್ಲಿ ಇಮ್ಯೂನ್ ಸ್ಟೇಟಸ್ ಇರುವವರಿಗೆ ಮಾತ್ರ ವಿವಿಧ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಅನುಮತಿ ಇದೆ. ಆದ್ದರಿಂದ ಊರಿನಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಸೌದಿ ಆರೋಗ್ಯ ಸಚಿವಾಲಯದ ಲಿಂಕಿನಲ್ಲಿ ನೋಂದಣಿ ಮಾಡಿ ಅವರ ತವಕ್ಕಲ್‌ನ ಆ್ಯಪ್‌ನಲ್ಲಿ ಸ್ಟೇಟಸನ್ನು ಅಪ್ಲೋಡ್ ಮಾಡುವುದು ಅಗತ್ಯವಾಗಿದೆ.

ಕೊವಾಕ್ಸಿನ್‌ಗೆ ಸೌದಿ ಮಾನ್ಯತೆ ನೀಡದೆ ಇರುವುದರಿಂದ ಅದನ್ನು ಪಡೆದವರಿಗೆ ತವಕ್ಕಲ್‌ನ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.