ದಿ ಗ್ರೇಟ್ ಮುಸ್ಲಿಮ್ ಕಿಚನ್

0
102

ಸನ್ಮಾರ್ಗ ವಾರ್ತೆ

✍️ ಪ್ರಸನ್ನನ್ ಕೆ.ಪಿ.

ಆ ಮನೆಯಲ್ಲಿ ಅವನಿದ್ದಾನೆ, ಅವಳೂ ಇದ್ದಾಳೆ…!! ಆತ ಬೆಳಿಗ್ಗೆ ಬೇಗನೆ ಏಳುತ್ತಾನೆ… ವುಝೂ ಮಾಡಿ ಬಂದು ಅವಳನ್ನು ತಟ್ಟಿ ಎಬ್ಬಿಸುತ್ತಾನೆ. ನಂತರ ಇಬ್ಬರೂ ತಮ್ಮ ಪ್ರಭುವಿನೊಂದಿಗೆ ಧ್ಯಾನದಲ್ಲಿರುತ್ತಾರೆ. ಕೆಲವೊಮ್ಮೆ ಅವಳ ನಿದ್ದೆ ಕಂಡು, ಆತ ಎಬ್ಬಿಸುವುದು ಬೇಡವೆಂದು ಭಾವಿಸುತ್ತಾನೆ. ನೀವು ಇವತ್ತು ನನ್ನನ್ನು ಒಂಟಿಯಾಗಿಸಿದಿರಿ ಎಂದು ಪಿರಿಪಿರಿ ಮಾಡುತ್ತಾಳೆ. ಆತ ಸುಬಹ್ ನಮಾಝಿಗೆ ಮಸೀದಿಗೆ ಹೋಗಿ ಮರಳುವಾಗ ಅವಳು ಶಾಂತವಾಗಿ ನಮಾಝ್ ನಿರ್ವಹಿಸಿ ಅಡುಗೆ ಮನೆಯಲ್ಲಿರುತ್ತಾಳೆ. ಅದೊಂದು ಯುದ್ಧ ಭೂಮಿ ಎಂದು ತಿಳಿದಿರುವುದರಿಂದ ಆತ ಗಿಡಗಳಿಗೆ ನೀರು ಹಾಕಿ ಹಸಿರು ತರಕಾರಿ ತೋಟವನ್ನು ಪೋಷಿಸುತ್ತಾನೆ. ನಂತರ ಕುರ್‌ಆನ್ ಓದುವುದನ್ನು ಜೊತೆಯಾಗಿ ನಿರ್ವಹಿಸುತ್ತಾರೆ.

ಮೊದಲ ಕೂಗಿಗೆ ಮಕ್ಕಳು ಏಳದಿದ್ದರೆ ಅವಳು ಜೋರಾಗಿ ಹೇಳುತ್ತಾಳೆ. ನಿಮ್ಮ ಮಕ್ಕಳು ಬೇಕಿದ್ದರೆ ನೀನೇ ಎಬ್ಬಿಸಿ ನಮಾಝ್ ಮಾಡಿಸಿ…

ಅದೆಲ್ಲಾ ಮುಗಿದು ಸ್ನಾನ ಮುಗಿಸಿ, ಉಪಾಹಾರ ಸೇವಿಸಿ ಅವಳು ನೀಡಿದ ಬುತ್ತಿಯನ್ನು ಹಿಡಿದುಕೊಂಡು ಆಫೀಸ್‌ಗೆ ಹೊರಡುತ್ತಾನೆ. ಮೆನು ಮತ್ತು ಇಷ್ಟಗಳೇನಿದ್ದರೂ ಅವಳದ್ದೇ. ಏನು ಸಿಕ್ಕಿದರೂ ಅದು ಅವಳು ಕಷ್ಟಪಟ್ಟು ಮಾಡಿದ್ದಲ್ಲವೇ? ಮಕ್ಕಳು ಶಾಲೆಗೆ ಹೋದರೆ ಅವಳ ಸಾಮ್ರಾಜ್ಯದಲ್ಲಿ ಅವಳು ಮಾತ್ರ. ಅವಳು ಓದಿ ಮುಗಿಸಿದ ಕುರ್‌ಆನ್ ಆತನನ್ನು ಅಸೂಯೆಗೊಳಿಸಿದೆ. ಆಫೀಸ್ ಮುಗಿಸಿ ಅಧಿಕ ವರಮಾನಕ್ಕಾಗಿ ಟ್ಯೂಶನ್ ನೀಡಿ ಆತ ಮರಳುತ್ತಿದ್ದ. ಎರಡು ಕಡೆಯೂ ಸಂಪಾದಿಸಬೇಕಾದ ವ್ಯಕ್ತಿ ಆತನೇ ಅಲ್ಲವೇ? ಖರ್ಚನ್ನು ಕಡಿಮೆ ಮಾಡಿ, ಅನಗತ್ಯವಾದುದನ್ನು ಬಿಟ್ಟು ಅವಳೂ ಆತನ ಜೊತೆಗಿದ್ದಾಳೆ.

ಹಾಗಿದ್ದರೂ ಕೆಲಸ ಸಿಕ್ಕಿದಾಗ ಆಕೆ ಸೋಮಾರಿಯಾದಳು. ನಿಮ್ಮ ಸಂಬಳದಿಂದಲೇ ನಮಗೆ ಜೀವನ ಸಾಗಿಸಬಹುದು. ನಾನೇಕೆ ಸೀಝನ್ ಟಿಕೆಟ್ ಯಾತ್ರೆ ಮತ್ತು ಯಾಕೆ ಬಸ್ಸಿನಲ್ಲಿ ನೇತಾಡಿಕೊಂಡು ಹೋಗಬೇಕು? ಆಕೆಗೆ ಇಷ್ಟವಿಲ್ಲವೆಂದ ಮೇಲೆ ಆತನಿಗೆ ವಿರೋಧಿಸಲು ಯಾವ ಹಕ್ಕಿದೆ? ಏನಿದ್ದರೂ ಮನೆಯ ಕೆಲಸಕ್ಕೆ ಕೆಲಸದಾಳು ಇಡಲು ಹೇಳಲಿಲ್ಲವಲ್ಲಾ? ಅದು ಅವಳ ಔದಾರ್ಯವಲ್ಲವೇ? ನಿನ್ನ ಶಿಕ್ಷಣವು ಮಕ್ಕಳಿಗೆ ಕಲಿಸಿ ಮುಗಿಸಲಿಕ್ಕಿರುವುದಾ ಎಂದು ಕೇಳಿದಾಗ ನಿಮಗೆ ಏನಾದರೂ ಸಮಸ್ಯೆಯಾದರೆ ನಾನು ಹೋಗುವುದಿಲ್ಲವೇ? ಎಂಬ ಗತ್ತು. ಆಗ ಯಾರು ಏನು? ಹೇಗೆ ಎಲ್ಲಿರುವರೆಂದು ಯಾರಿಗೆ ಗೊತ್ತು? ಏನಿದ್ದರೂ ರಜಾದಿನಗಳಲ್ಲಿ ಆತನ ಆಲಸ್ಯ ಅವಳನ್ನು ಅಸೂಯೆಗೊಳಪಡಿಸುತ್ತದೆ. ಒಂದು ದಿನವಿಡೀ ಅಡುಗೆ ಮನೆಗೆ ಹೋಗದೆ ರಜೆ ತೆಗೆಯಬೇಕು ಎಂದು ಹೇಳಲಿಕ್ಕಿದೆ. ನೀನು ಸಹಾಯಕ್ಕಾಗಿ ನನ್ನನ್ನು ಕರೆ ಎಂದು ಹೇಳಿದಾಗ ಅವನು ಕೈಯಲ್ಲಿ ಕೆಲವು ದಿನ ಅಡುಗೆ ಮನೆಯಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ಮಾಡುವಾಗ ಅವಳು ಸಹಿಸುತ್ತಾಳೆ. ಇನ್ನೂ ಹೆಚ್ಚಾದರೆ ಒಮ್ಮೆ ಹೋಗ್ತೀರಾ ನೀವಿಲ್ಲಿದ್ದರೆ ನನಗೆ ಡಬ್ಬಲ್ ಕೆಲಸವೆಂದು ಹೇಳಿ ಕೋಪಿಸುವುದಿದೆ. ಅವರವರು ತಿಂದ ಪಾತ್ರೆ ಅವರವರೇ ತೊಳೆದರೆ ಅಮ್ಮನಿಗೆ ಖುಷಿಯಾಗುತ್ತದೆ ಎಂದು ಮಕ್ಕಳಿಗೆ ಕಲಿಸಿಕೊಟ್ಟರೆ, ಆತ ತೊಳೆಯುವುದು ಸರಿಯಾಗುವುದಿಲ್ಲವೆಂದು ಹೇಳಿ ಅವಳು ಪುನಃ ತೊಳೆಯುವುದಿದೆ.

ರಜಾದಿನಗಳಲ್ಲಿ ಅವಳ ಯುದ್ಧಕ್ಕೆ ಬದಲಿಯಾಗಿ ಗುಡಿಸುವುದು, ಒರೆಸುವುದು, ಕಕ್ಕೂಸು ತೊಳೆಯುವಂತ ಕೆಲಸ ಮಾಡಿ ಆತ ಐಕ್ಯತೆಯನ್ನು ತೋರಿಸುತ್ತಾನೆ. ಅವನ ಪಾಕೆಟ್‌ನ ಭಾರವನ್ನು ನೋಡಿ, ಅಡುಗೆ ಮನೆಯಲ್ಲಿ ಹರತಾಳ ಆಚರಿಸುವುದಿದೆ. ಹೊರಗಿನ ಆಹಾರಕ್ಕೆ ಆಶೆ ಪಡುವ ಅಮ್ಮನನ್ನು ಕಂಡು ಪಪ್ಪಾ ಅಮ್ಮನನ್ನು ಹೀಗೆ ಹಿಂಸಿಸಬಾರದು. ನಿಮ್ಮಲ್ಲಿ ಅತ್ಯುತ್ತಮರು ತಮ್ಮ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವರು ಎಂದು ಪ್ರವಾದಿಯವರು(ಸ) ಹೇಳಲಿಲ್ಲವೇ? ಎಂದು ಮಕ್ಕಳು ನೆನಪಿಸುವಾಗ ಅಮ್ಮನ ಕೈಯಿಂದ ಮಾಡಿದ ಅಡುಗೆಯ ಸ್ವಾದ ಹೊರಗಿನಿಂದ ಲಭಿಸುತ್ತದೆಯಾ ಎಂದು ಹೇಳಿ ಆತ ಜಾರಿಕೊಳ್ಳುವುದಿದೆ.

ಆರ್ತವ ಸಮಯದಲ್ಲಿ ನಮಾಝ್‌ಗೆ ಕೂಡ ರಜೆಯನ್ನು ನೀಡಿ ಅವಳನ್ನು ಪ್ರೀತಿಸುವ ದೇವನೊಂದಿಗೆ ಆತನಿಗೆ ದೂರು ಇದೆ ಎಂದು ಹೇಳಿ ಅವಳನ್ನು ಸಂತೋಷ ಪಡಿಸುವುದಿದೆ. ಪ್ರತಿಯೊಂದು ನಮಾಝ್‌ನ ಬಳಿಕವೂ ರಬ್ಬನಾ ಹಬ್‌ಲನಾ ಮಿನ್ ಅಝ್‌ವಾಜಿನ ವಝರ‍್ರಿಯಾತಿನಾ… ಪ್ರತಿಯೊಬ್ಬರ ಮುಖವನ್ನೂ ಮರೆಯದೆ ಹೇಳಿ ಮುಗಿಸಲು ಅವಳಿಗೆ ಸಮಯ ಸಿಗುವುದರ ಕುರಿತು ಅವನಿಗೆ ಆನಂದವಿದೆ. ಹಾಗಿದ್ದರೂ, ಅಮ್ಮ, ಮಗಳು ಸೊಸೆ, ಸಹೋದರಿಯಾಗಿ ವೇಷ ಬದಲಿಸುವ ಅವಳ ಮಾಯಾಜಾಲದಲ್ಲಿ ಆಶ್ಚರ್ಯವಿದೆ.

ಆತನಂತೆಯೇ ಅವಳಿಗೆ ಗೆಳೆಯರಿದ್ದಾರೆ. ಮಾತುಗಳೂ ಚರ್ಚೆಗಳೂ ನಡೆಯುತ್ತಿರುತ್ತವೆ. ಆದರೂ ಆತನ ಪ್ರಯಾಣದಲ್ಲಿ ಅವಳೇ ಜೊತೆಗಿರುತ್ತಾಳೆ. ಪ್ರಯಾಣ ಹೆಚ್ಚಾದರೆ ಕಣ್ಣೂ ಬೆರಗಿಸುತ್ತಾಳೆ. ನಾವು ಏನಾದರೂ ಹೇಳಿದರೆ ನಮ್ಮನ್ನು ಸರಿಪಡಿಸಿ ನಿಲ್ಲಿಸಲು ನೋಡಬೇಡಿ, ಅನುಕಂಪ ತೋರಿಸಿ ಒಟ್ಟಿಗೆ ನಿಲ್ಲಿಸಲು ಪ್ರಯತ್ನಿಸಿ ಎಂದು ಪ್ರವಾದಿಯವರ(ಸ) ಮಾತನ್ನು ಉಲ್ಲೇಖಿಸಿ ಬಾಯಿಮುಚ್ಚಿಸುವುದಿದೆ. ತರಕಾರಿ ಕತ್ತರಿಸಿದರೆ ಮಾತ್ರವೇ ಪದಾರ್ಥ ಮಾಡುತ್ತೇನೆ ಎಂದೂ ಹೇಳುವುದಿದೆ. ಹಾಗಿದ್ದರೂ ಆತನ ನೋಟ ಮಾತ್ರ. ಮಾತು, ಕೃತಿಗಳಲ್ಲಿ ಹೊರಬರುವ ಪುರುಷಾದಿಪತ್ಯದ ವಾಂಛೆಯನ್ನು ತೊಳೆಯದಿದ್ದರೆ, ನಿನ್ನ ಅಧೀನದಲ್ಲಿರುವವರು ನಿನ್ನ ವಿರುದ್ಧ ದೂರು ನೀಡಿದರೆ ಅಂದು ಏನು ಮಾಡುವುದು ಎಂದು ಯೋಚಿಸಿ ಆತ ದುಃಖ ಪಡುವುದಿದೆ.

ನಿಮ್ಮ ಅಮ್ಮ ಇವತ್ತು ಕೋಪದಿಂದಿದ್ದಾರಲ್ಲಾ ಎಂದು ಹೇಳಿ, ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದ ಪ್ರವಾದಿಯವರು(ಸ) ತೋರಿಸಿದ ಮಾದರಿಯನ್ನು ನೆನಪಿಸಿಕೊಂಡು ಸ್ವಂತ ತಪ್ಪುಗಳನ್ನು ಲೆಕ್ಕ ಹಾಕುವುದಿದೆ. ತಾಯಿಯ ತೃಪ್ತಿಯಿಲ್ಲದಿದ್ದರೆ, ಮಗಳ ತೃಪ್ತಿಯಿಲ್ಲದಿದ್ದರೆ ಸ್ವರ್ಗದ ಕವಾಟಗಳಲ್ಲಿ ತಡೆಯಲ್ಪಡುವ ಪುರುಷ ಜೀವಗಳನ್ನು ನೆನಸಿ ಸಂಕಟ ಪಡುವುದಿದೆ. ಪ್ರತಿಯೊಬ್ಬ ಅಧಿಕಾರಿಯೂ ಪ್ರಶ್ನಿಸಲ್ಪಡುವ ಕುಟುಂಬದ ಅಧಿಕಾರಿ ಮೇಲ್ವಿಚಾರಕ ನೀನು ಎಂದು ಹೇಳಿ ಸಮಾಧಾನ ಪಟ್ಟುಕೊಳ್ಳುವುದಿದೆ. ಹಾಗಿದ್ದರೂ ಸತಿ-ಪತಿಗಳಾಗಿ, ನೀನು-ನಾನು ಅಲ್ಲದೆ ನಾವಾಗಿ ಸಿರಾತುಲ್ ಮುಂತಹಾವನ್ನೂ ದಾಟಿ ಅವನನ್ನು ಕಾಣುವಾಗ ಎಲ್ಲವನ್ನೂ ಪರಸ್ಪರ ಕ್ಷಮಿಸಿಕೊಂಡು ಶಾಂತಿ ಸಮಾಧಾನದಿಂದ ತಲುಪಬೇಕು ಎಂಬ ಕನಸು ಕಾಣುತ್ತಾನೆ.