‘ದಿ ಕೇರಳ ಸ್ಟೋರಿ’ ಇದೊಂದು ಪ್ರೊಪಗಂಡ ಮೂವೀ, ಇದರಲ್ಲಿ ಸತ್ಯವಿಲ್ಲ: ಕಮಲ್ ಹಾಸನ್

0
442

ಸನ್ಮಾರ್ಗ ವಾರ್ತೆ

‘ದಿ ಕೇರಳ ಸ್ಟೋರಿ’ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ: ಕಮಲ್ ಹಾಸನ್

ಅಬೂಧಾಬಿ: ದೇಶದಾದ್ಯಂತ ವಿವಾದ ಸೃಷ್ಠಿಸಿರುವ ಕಪೋಲಕಲ್ಪಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಇದೊಂದು ಪ್ರೊಪೊಗಾಂಡ ಸಿನಿಮಾ, ಈ ಸಿನಿಮಾದಲ್ಲಿ ಸತ್ಯ ಇಲ್ಲ ಎಂದು ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಅಬೂಧಾಬಿಯಲ್ಲಿ ನಡೆದ ‘ಐಫಾ ಅವಾರ್ಡ್ಸ್’ ಕಾರ್ಯಕ್ರಮದ ಸಂದರ್ಭದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಕುರಿತು ಮಾದ್ಯಮದವರ ಪ್ರಶ್ನೆಗೆ ಕಮಲ್ ಹಾಸನ್ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

‘ನಾನು ಸಿನಿಮಾ ಕುರಿತು ಈ ಮೊದಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ಸತ್ಯಕ್ಕೆ ದೂರವಾಗಿದೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.