ಸಹಾಬಿಯ ಮಾತು ಕೇಳಿ ತಂತ್ರ ಬದಲಿಸಿದ ಪ್ರವಾದಿ(ಸ)

0
390

ಸನ್ಮಾರ್ಗ ವಾರ್ತೆ

ಅಲ್ಲಾಹನ ಪ್ರವಾದಿಯವರು(ಸ) ಯುದ್ಧ ಸಂದರ್ಭದಲ್ಲಿ ಯಾವುದಾದರೂ ಸಂಗಡಿಗರಿಗೆ ಕ್ಷಮೆ ಯಾಚನೆಯ ಪ್ರಾರ್ಥನೆ ಮಾಡಿದರೆ ಅವರು ಯುದ್ಧದಲ್ಲಿ ಹುತಾತ್ಮರಾಗುವುದು ಖಚಿತ ಎಂದು ಸಹಾಬಿಗಳಿಗೆ ಗೊತ್ತಿತ್ತು. *(ಸಹೀಹ್ ಮುಸ್ಲಿಂ 2/115).

ಈ ಘಟನೆಯು ಕೈಬರ್‌ನ ಯುದ್ಧದಲ್ಲಿ ಹಝ್ರತ್ ಆಮಿರ್‌ರ ಬಗ್ಗೆ ನಡೆಯಿತು. ಆಮಿರ್‌ರಿಗೆ ಪ್ರವಾದಿಯವರು(ಸ) ಕ್ಷಮಾಯಾಚನೆಯ ಪ್ರಾರ್ಥನೆ ಮಾಡಿದರು. ಆದುದರಿಂದ ಮುಸ್ಲಿಮರು ಹೇಳಿದರು, ಅವರಿಗೆ (ಆಮಿರ್‌ರಿಗೆ) ದೀರ್ಘಾಯುಷ್ಯದ ಪ್ರಾರ್ಥನೆ ಮಾಡಿದ್ದರೆ ಅವರ ಮೂಲಕ ನಾವೂ ಸ್ವಲ್ಪ ಪ್ರಯೋಜನ ಪಡೆಯಬಹುದಾಗಿತ್ತು.

ಪ್ರವಾದಿಯವರು(ಸ) ಕೈಬರ್ ಸಮೀಪದಲ್ಲಿದ್ದರು. ಸಹ್ಬ ಕಣಿವೆಯಲ್ಲಿ ಅಸರ್ ನಮಾಝ್ ನಿರ್ವಹಿಸಿದರು. ನಂತರ ಭೋಜನದ ವಸ್ತುಗಳನ್ನು ತರಿಸಿದರು. ಭೋಜನ ಮುಗಿಸಿಕೊಂಡ ನಂತರ ಮಗ್ರಿಬ್ ನಮಾಝ್ ನಿರ್ವಹಿಸಿದರು. ಆನಂತರ ಇಶಾ ನಮಾಝ್ ನಿರ್ವಹಿಸಿದರು. *(ಸಹೀಹ್ ಬುಖಾರಿ 2/603, ಮುಗಝಿಲ್ ವಕದಿ ಗಝ್ವಾ ಕೈಬರ್. ಪುಟ 112)

ಮುಸ್ಲಿಮರು ಮರುದಿವಸ ಬೆಳಗಾಗುವ ವೇಳೆಗೆ ಕೈಬರ್‌ನ ಹತ್ತಿರಕ್ಕೆ ಬಂದು ತಲುಪಿದ್ದರು. ಆದರೆ ಈ ಸುದ್ದಿ ಕೈಬರ್ ನಿವಾಸಿಗಳಿಗೆ ತಲುಪಲಿಲ್ಲ. ಎಷ್ಟರವರೆಗೆಂದರೆ ಸ್ವಲ್ಪವೂ ಗೊತ್ತಾಗಿರಲಿಲ್ಲ. ಅದುದರಿಂದ ಮುಸ್ಲಿಮರು ಅವರ ಮುಂದೆ ಅನಿರೀಕ್ಷಿತವಾಗಿ ಮುಖಾಮುಖಿಯಾಗುವ ಪರಿಸ್ಥಿತಿ ಇತ್ತು. ಆದರೆ ರಾತ್ರಿಯ ಸಮಯ ಯಾವುದೇ ಸಮುದಾಯದವರ ಹತ್ತಿರಕ್ಕೆ ಮುಸ್ಲಿಮರು ತಲುಪಿದರೆ ಬೆಳಗಾಗದೇ ಅವರ ಹತ್ತಿರಕ್ಕೆ ಹೋಗುವಂತಿರಲಿಲ್ಲ. ಇದು ಪ್ರವಾದಿಯವರ(ಸ) ನಿಯಮವಾಗಿತ್ತು. ಆದ್ದರಿಂದ ಮುಸ್ಲಿಮರು ಅ ರಾತ್ರಿ ಅಲ್ಲಿಯೇ ಕಳೆದು ಬೆಳಗಾಗುವುದನ್ನು ಕಾಯಬೇಕಾಯಿತು. ಮರು ದಿನ ಪ್ರವಾದಿಯವರು(ಸ) ಫಝ್ರ್ ನಮಾಝ್ ನಿರ್ವಹಿಸಿದರು. ಆ ನಂತರ ಮುಸ್ಲಿಮರು ಕೈಬರ್‌ನೆಡೆಗೆ ಹೊರಟರು. ಮೊದಲೇ ಕೈಬರಿ ನವರಿಗೆ ಇದು ಯಾವುದೂ ಗೊತ್ತಿರಲಿಲ್ಲ. ಮುಸ್ಲಿಮರು ಇಷ್ಟು ಬೇಗನೆ ಇಲ್ಲಿಗೆ ಬಂದು ಬಿಡುತ್ತಾರೆ ಎಂಬ ಐಡಿಯಾವೇ ಇರಲಿಲ್ಲ. ಆದುದರಿಂದ ಅವರು ತಮ್ಮ ಕೃಷಿಯ ಸಲಕರಣೆ ಗಳನ್ನು ಎತ್ತಿಕೊಂಡು ಗದ್ದೆಗೆ ಹೊರಟಿದ್ದರು.

ಆದರೆ ಅಕಸ್ಮಿಕವಾಗಿ ಮುಸ್ಲಿಮರ ಸೈನ್ಯ ಅವರ ಮುಂದಿತ್ತು. ಇದನ್ನು ನೋಡಿ ಕೊಂಡು ಕೈಬರಿನ ಗ್ರಾಮಸ್ಥರು ಗಾಬರಿ ಬಿದ್ದರು. ಚಡಪಡಿಸುತ್ತಾ ಪೇಟೆಯ ಕಡೆಗೆ ಓಡಿದರು. ದೇವನಾಣೆಗೂ ಮುಹಮ್ಮದ್(ಸ) ಸೈನ್ಯದೊಂದಿಗೆ ಬಂದಿದ್ದಾರೆ ಎಂದು ಪೇಟೆಯಲ್ಲಿ ಹೋಗಿ ಕೂಗಿ ಹೇಳತೊಡಗಿದರು. *(ಸಹೀಹ್ ಬುಖಾರಿ, ಬಬ್ ಗಝ್ವಾ ಕೈಬರ್ 2/603,604)

ನಂತರ ಪ್ರವಾದಿಯವರು(ಸ) ಸಂಗಡಿಗರಿಗೆ ತಂಗಲು ಒಂದು ಜಾಗವನ್ನು ಗುರುತಿಸಿದರು. ಆದರೆ ಆಗ ಮುಂದಿರ್(ರ) ಪ್ರವಾದಿಯವರ(ಸ) ಬಳಿಗೆ ಬಂದು ಹೇಳಿದರು, ಪ್ರವಾದಿ ಯವರೇ(ಸ), ಇಲ್ಲಿ ತಂಗಬೇಕೆಂದು ಅಲ್ಲಾಹನು ಆದೇಶವಾಗಿದೆಯೇ? ಅಥವಾ ನಿಮ್ಮ ಅಭಿಪ್ರಾಯದಲ್ಲಿ ಈ ಜಾಗವನ್ನು ಅಥವಾ ಯುದ್ಧ ತಂತ್ರವಾಗಿ ಆಯ್ಕೆ ಮಾಡಿ ಕೊಂಡಿದ್ದೀರಾ?

ಇದೊಂದು ಅಭಿಪ್ರಾಯ ಮತ್ತು ಯುದ್ಧ ತಂತ್ರವಾಗಿದೆ ಎಂದು ಪ್ರವಾದಿಯವರು(ಸ) ಹೇಳಿದರು.

ಆಗ ಮುಂದಿರ್‌ರು ಹೇಳಿದರು, ಅಲ್ಲಾಹನ ಪ್ರವಾದಿಯವರೇ(ಸ), ಈ ಜಾಗ ನಜಾತ್ ಕೋಟೆಗೆ ತುಂಬ ಹತ್ತಿರದಲ್ಲಿದೆ. ಮತ್ತು ಕೈಬರಿನ ಎಲ್ಲ ಯೋಧರು ಈ ಕೋಟೆಯಲ್ಲಿದ್ದರೆ. ಅವರಿಗೆ ನಮ್ಮ ಪರಿಸ್ಥಿತಿ ಹೇಗಿದೆ ಎಂದು ಗೊತ್ತಾಗುತ್ತದೆ. ಇದೇ ವೇಳೆ ಅವರ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಾಗುವುದಿಲ್ಲ. ಅವರು ಹೂಡುವ ಬಾಣವು ನಮ್ಮವರೆಗೆ ತಲುಪಬಹುದು. ನಮ್ಮ ಬಾಣ ಅವರವರೆಗೆ ತಲುಪಲಾರದು. ಅವರು ಮುತ್ತಿಗೆ ಹಾಕಿದರೂ ನಾವು ಸುರಕ್ಷಿತವಾಗಿರುವುದಿಲ್ಲ. ಮಾತ್ರವಲ್ಲ ಈ ಜಾಗ ಖರ್ಜೂರದ ಮರಗಳ ನಡುವೆ ಇದೆ. ಕೋಟೆಯ ಕೆಳಭಾಗದಲ್ಲಿಯೂ ಇದೆ. ಇಲ್ಲಿನ ಭೂಮಿ ಕ್ರಿಮಿಕೀಟಗಳ ಹಾವಳಿಯಿಂದ ಕೂಡಿದೆ.

ಅದುದರಿಂದ ಇಲ್ಲಿಂದ ಬೇರೆಡೆಗೆ ಹೋಗಿ ಸುರಕ್ಷಿತ ಜಾಗದಲ್ಲಿ ಸೈನ್ಯಕ್ಕೆ ತಂಗಲು ಆದೇಶ ನೀಡಿದರೆ ಉತ್ತಮವಿತ್ತು ಎಂದರು.
ಮುಂದಿರ್‌ರು ಹೇಳಿದುದನ್ನು ಕೇಳಿದ ಮೇಲೆ ಪ್ರವಾದಿವರ್ಯರು(ಸ) ಹೇಳಿದರು, ನೀವು ನೀಡಿರುವ ಸಲಹೆ ಖಂಡಿತ ಸರಿಯಾಗಿದೆ. ಆ ನಂತರ ಮುಸ್ಲಿಮರು ಇರಲು ಬಯಸಿದ ಜಾಗವನ್ನು ಬದಲಿಸಲಾಯಿತು ಮತ್ತು ಅಲ್ಲಿಂದ ಬೇರೆ ಕಡೆಗೆ ಮುಸ್ಲಿಂ ಸೈನ್ಯವು ಹೊರಟಿತು. ಪ್ರವಾದಿ(ಸ) ಮತ್ತು ಸಂಗಡಿಗರು ಕೈಬರ್‌ಗೆ ಬಹಳ ಹತ್ತಿರ ತಲುಪಿದರು. ಮುಸ್ಲಿಮರಿಗೆ ಕೈಬರಿನ ಪೇಟೆಯು ಕಾಣಿಸತೊಡಗಿತು.

ಆಗ ಪ್ರವಾದಿಯವರು(ಸ), ನಿಲ್ಲಿರಿ ಎಂದರು ಮತ್ತು ಹೀಗೆ ಪ್ರಾರ್ಥಿಸಿದರು.- ಓ ಅಲ್ಲಾಹನೇ, ಏಳು ಆಕಾಶಗಳು ಮತ್ತು ಯಾವುದರ ಮೇಲೆ ನೆರಳು ಬಿದ್ದಿವೆ ಅದರ ಪಾಲಕ ಪ್ರಭುವೇ! ಮತ್ತು ಏಳು ಭೂಮಿ ಮತ್ತು ಅದನ್ನು ಹೊತ್ತು ಕೊಂಡಿರುವವುಗಳ ಪಾಲಕ ಪ್ರಭುವೇ! ಮತ್ತು ಶೈತಾನ ಮತ್ತು ಯಾರನ್ನು ಅವನು ಪಥಭ್ರಷ್ಟಗೊಳಿಸಿದನೋ ಅವನ ಪಾಲಕ ಪ್ರಭುವೇ, ನಾವು ನಿನ್ನಿಂದ ಈ ಕಾಲನಿಯ ಒಳಿತು, ಇದರಲ್ಲಿರುವವರ ಒಳಿತು ಮತ್ತು ಇದರಲ್ಲಿ ಏನೆನಿವೆಯೋ ಅದರ ಒಳಿತಿನ ವಿಷಯ ಎತ್ತುತ್ತಿದ್ದೇವೆ. ಮತ್ತು ಈ ಕಾಲನಿಯ ದುಷ್ಟತನದಿಂದ ಮತ್ತು ಇದರಲ್ಲಿರುವವರ ದುಷ್ಟತನದಿಂದ ಇದರೊಳಗೆ ಏನೇನಿವೆ ಅದರಿಂದ ಅಭಯ ಕೇಳುತ್ತಿದ್ದೇವೆ.
ಪ್ರಾರ್ಥನೆಯ ನಂತರ ಪ್ರವಾದಿಯವರು(ಸ) ಹೇಳಿದರು, ಹೋಗೋಣ, ಅಲ್ಲಾಹನ ಹೆಸರಿನಲ್ಲಿ ಮುಂದುವರಿಯಿರಿ. *(ಇಬ್ನೆ ಹಿಶಾಮ್ 2/219)