ಒಂದೇ ಮಳೆಗೆ ಸೋರಲಾರಂಭಿಸಿದ ಅಯೋಧ್ಯೆ ರಾಮ ಮಂದಿರದ ಮೇಲ್ಛಾವಣಿ!

0
1289

ಸನ್ಮಾರ್ಗ ವಾರ್ತೆ

ಭಾರೀ ಪ್ರಚಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ 2024ರ ಜ.22ರಂದು ಅಯೋಧ್ಯೆಯಲ್ಲಿ ಉದ್ಘಾಟಿಸಿದ್ದ ರಾಮಮಂದಿರ ಮತ್ತೆ ಸುದ್ದಿಯಲ್ಲಿದೆ.

ಉತ್ತರ ಪ್ರದೇಶದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಅಯೋಧ್ಯೆಯಲ್ಲೂ ಕೂಡ ಮೊದಲ ಮಳೆ ಸುರಿದಿದೆ. ಈ ಮೊದಲ ಮಳೆಗೆ ರಾಮಮಂದಿರದ ಛಾವಣಿಯಲ್ಲಿ ನೀರು ಸೋರಲು ಆರಂಭಗೊಂಡಿರುವುದಾಗಿ ವರದಿಯಾಗಿದೆ.

ಅಲ್ಲದೇ, ಈ ಬಗ್ಗೆ ANI ಸುದ್ದಿ ಸಂಸ್ಥೆಗೂ ಅಧಿಕೃತ ಹೇಳಿಕೆ ನೀಡಿರುವ ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, “ಅಯೋಧ್ಯೆಯಲ್ಲಿ ಸುರಿದ ಮೊದಲ ಮಳೆಗೆ ಈಗಾಗಲೇ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಸ್ಥಳದಲ್ಲೂ ನೀರು ಸೋರಿಕೆಯಾಗಿದೆ” ಎಂದು ಬಹಿರಂಗ ಪಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾಮಗಾರಿ ಕುರಿತು ಮಾತನಾಡುತ್ತಿದ್ದ ವೇಳೆ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, “ಜುಲೈ 2025ರೊಳಗೆ ರಾಮಮಂದಿರದ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯ. ಮೊದಲ ಮಳೆಗೆ ರಾಮಲಲ್ಲಾ ಕುಳಿತಿರುವ ಸ್ಥಳದಲ್ಲೇ ನೀರು ಬರಲು ಆರಂಭಿಸಿದೆ. ಹಾಗಾಗಿ, ಇದು ಯಾಕೆ ಹೀಗಾಯಿತು ಎಂಬುದರ ಬಗ್ಗೆ ಸಂಬಂಧಪಟ್ಟವರು ಉತ್ತರಿಸಬೇಕು. ಈಗಾಗಲೇ ನಡೆಸಿರುವ ಕಾಮಗಾರಿಯ ಬಗ್ಗೆ ತನಿಖೆ ಕೂಡ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

https://x.com/RituRathaur/status/1805194486928314593?t=aTgo7UZeiTRS1Aj0dMFsog&s=19

“ಈಗಾಗಲೇ ನಿರ್ಮಿಸಿರುವ ರಾಮ ಮಂದಿರದಲ್ಲಿ ನೀರು ಹೊರಹೋಗಲು ಸರಿಯಾದ ದಾರಿ ಇಲ್ಲ. ಈ ಸಮಸ್ಯೆ ಬಹಳ ದೊಡ್ಡದು, ಮೊದಲು ಈ ಸಮಸ್ಯೆ ಬಗೆಹರಿಸಬೇಕು ಎಂದರು. ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ 2025ರಲ್ಲಿ ಸಂಪೂರ್ಣ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಒಳ್ಳೆಯದೇ. ಆದರೆ ಒಂದು ವರ್ಷದಲ್ಲಿ ಪೂರ್ಣಗೊಳಿಸುವುದು ಅಸಾಧ್ಯ ಎಂಬುದು ನನ್ನ ಅನಿಸಿಕೆ” ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

https://x.com/vibewidyou/status/1805217587359269044?t=A3riDSvwoxP06fINjiduhA&s=19

ರಾಮಮಂದಿರದಲ್ಲಿನ ಪ್ರಸ್ತುತ ಸಮಸ್ಯೆಯ ಬಗ್ಗೆ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನೀಡಿರುವ ಹೇಳಿಕೆಯು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ರಾಮಮಂದಿರದ ಕಾಮಗಾರಿಯಲ್ಲಿ ಲೋಪ ಹಾಗೂ ಭ್ರಷ್ಟಾಚಾರದ ವಾಸನೆ ಬಡಿದಿದೆ. ಈ ವಿಚಾರವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

ಇದೇ ವರ್ಷದ ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆ ಸಮಾರಂಭ ಜರುಗಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನಡೆದಿತ್ತು. ಆದರೆ ಇದು 2024ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಗೆ ಯಾವುದೇ ಲಾಭ ನೀಡಿರಲಿಲ್ಲ.

ಅಯೋಧ್ಯೆ ಇರುವ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಸೋಲಿನಿಂದ ಸಂಘಪರಿವಾರ, ಬಲಪಂಥೀಯರ ಸಹಿತ ಬಿಜೆಪಿಯ ಬೆಂಬಲಿಗರು ಆಘಾತಕ್ಕೊಳಗಾಗಿದ್ದರು.