ತನ್ನ ವಿರುದ್ಧ ಇಸ್ರೇಲ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ

0
156

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಜೂ. 26: ಇಸ್ರೇಲ್ ತನ್ನ ಮೇಲೆ ಅಪಪ್ರಚಾರ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟರೆಸ್ ಹೇಳಿದ್ದಾರೆ.

ಆದರೆ ಅವರು ಈ ವೇಳೆ ಇಸ್ರೇಲ್ ಹೆಸರನ್ನು ಉಲ್ಲೇಖಿಸಿಲ್ಲ. ತನ್ನ ವಿರುದ್ಧ ಸುಳ್ಳು ಪ್ರಚಾರದಲ್ಲಿ ಯಾರಿದ್ದಾರೆ ಎಂಬ ಪರೋಕ್ಷ ಸೂಚನೆಯನ್ನು ಈ ವೇಳೆ ನೀಡಿದರು.

ತಾನೆಂದೂ ಹಮಾಸ್ ಅನ್ನು ಟೀಕಿಸಿಲ್ಲ. ಹಮಾಸ್‍ನ ಪ್ರವೃತ್ತಿಯನ್ನು ಖಂಡಿಸಿಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. 102 ಬಾರಿ ಹಮಾಸ್‍ನ ಪ್ರವೃತ್ತಿಯನ್ನು ಖಂಡಿಸಿದವನು ನಾನು. ಇದರಲ್ಲಿ 51 ಬಾರಿ ಅಧಿಕೃತ ಭಾಷಣ ನೀಡುವಾಗ ಹಮಾಸ್ ಅನ್ನು ಖಂಡಿಸಿದ್ದು ಸೇರಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೇ ಇಸ್ರೇಲಿನ ಅಮೆರಿಕದ ರಾಯಭಾರಿ ಗಿಲಾಡ್ ಎರ್ದಾನ್ ಅವರು ಗುಟರೆಸ್ ಹೇಳಿಕೆಗೆ ಹಸ್ತಕ್ಷೇಪ ವ್ಯಕ್ತಪಡಿಸಿದ್ದು ಅವರ ಖಂಡನೆಗಳು ಮತ್ತು ಪ್ರವೃತ್ತಿಗಳನ್ನು ಹೋಲಿಸುವಾಗ ಖಂಡನೆಗಳು ಶೂನ್ಯ ಸ್ಥಾನದಲ್ಲಿರುತ್ತದೆ ಎಂದು ಹೇಳಿದ್ದಾರೆ.