ಜಗತ್ತಿಗೆ ಈಗ ಚೀನದ ಅಗತ್ಯತೆ ಇದೆ: ಕ್ಸಿ ಜಿನ್‍ ಪಿಂಗ್

0
188

ಸನ್ಮಾರ್ಗ ವಾರ್ತೆ

ಬೀಜಿಂಗ್: ಚೀನಾ ಅಧ್ಯಕ್ಷರಾಗಿ ಕ್ಸಿ ಜಿನ್ ​ಪಿಂಗ್(69) ಸತತ ಮೂರನೇಯ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಮಾವೊ ತ್ಸೆ ತುಂಗ್‍ರ ಬಳಿಕ ಚೀನಾದ ಅತ್ಯಂತ ಪ್ರಬಲ ನಾಯಕನಾಗಿ ಕ್ಸಿ ಜಿನ್ ​ಪಿಂಗ್‌‌ಗೆ ಕಮ್ಯುನಿಸ್ಟ್ ಪಾರ್ಟಿ ಅಂಗೀಕಾರ ನೀಡಿತು. ಭಾನುವಾರ ನಡೆದ ಈ ಐತಿಹಾಸಿಕ ಬೆಳವಣಿಗೆಯ ನಂತರ ಮಾತನಾಡಿದ ಅವರು, ‘ಜಗತ್ತಿಗೆ ಈಗ ಚೀನಾದ ಅಗತ್ಯತೆ ಇದರ’ ಎಂದರು. ಪಿಂಗ್‌ರ ತಂದೆ ಮಾವೊರ ಅನುಯಾಯಿ ಆಗಿದ್ದರು.

40 ವರ್ಷದ ಕಠಿಣ ಪ್ರಯತ್ನದ ಬಳಿಕ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಪ್ರಗತಿ, ದೀರ್ಘ ಕಾಲಿಕ ಸಾಮಾಜಿಕ ಸ್ಥಿರತೆಯನ್ನು ಚೀನ ಸಾಧಿಸಿದೆ ಎಂದು ಕ್ಸಿ ಜಿನ್‍ ಪಿಂಗ್ ಪಾರ್ಟಿ ಹೇಳಿಕೊಂಡಿದ್ದು, ಜನರ ಉತ್ತಮ ಭವಿಷ್ಯಕ್ಕಾಗಿ ಕಠಿಣ ಪರಿಶ್ರಮ ನಡೆಸುವುದಾಗಿ  ಭರವಸೆ ನೀಡಿದೆ. ಈ ಸಂದರ್ಭದಲ್ಲಿ, ತನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕಾಗಿ ಜನರು ಮತ್ತು ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತರಿಗೆ ಕ್ಸಿ ಜಿನ್ ಪಿಂಗ್ ಕೃತಜ್ಞತೆ ಸಲ್ಲಿಸಿದ್ದಾರೆ.