ನಕಲಿ ಎನ್‍ಕೌಂಟರ್: ಉತ್ತರಪ್ರದೇಶ ರಾಮ್ ರಾಜ್ ಬದಲು ನಾಥೂ ರಾಮ್ ರಾಜ್- ಅಖಿಲೇಶ್ ಯಾದವ್ ಟೀಕೆ

0
499

ಸನ್ಮಾರ್ಗ ವಾರ್ತೆ

ಲಕ್ನೊ,ಅ.11: ಕಳೆದ ವಾರ ನಕಲಿ ಎನ್‍ಕೌಂಟರಿನಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆಯನ್ನು ಉದ್ಧರಿಸಿ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್, “ಉತ್ತರಪ್ರದೇಶ ಈಗ ರಾಮ್ ರಾಜ್ ಬದಲು ನಾಥೂರಾಮ್ ರಾಜ್ ಆಗಿದೆ” ಎಂದು ತೀಕ್ಷ್ಣ ಟೀಕೆ ಮಾಡಿದ್ದಾರೆ.

ಕೊಲೆಯಾದ ಯುವಕನ ಮನೆಗೆ ಅವರು ಬೇಟಿ ನೀಡಿದ ಬಳಿಕ ಪ್ರತಿಕ್ರಿಯಿಸುತ್ತಿದ್ದರು. ಅನಧೀಕೃತ ಮರಳು ತೆಗೆದ ಆರೋಪದಲ್ಲಿ ಪೊಲೀಸರು ಪುಷ್ಪೇಂದ್ರ ಯಾದವ್‍ರನ್ನು ಎನ್‍ಕೌಂಟರ್ ಮಾಡಿದ್ದರು. ಅವರ ಮನೆಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಕುಟುಂಬ ಸದಸ್ಯರು ಸಂತೈಸಿದರು.

ಕಳೆದ ರವಿವಾರ ಪಟ್ರೋಲಿಂಗ್ ಪೊಲೀಸರು ಪುಷ್ಪೇಂದ್ರ ಯಾದವ್‍ರ ಎನ್‍ಕೌಂಟರ್ ಮಾಡಿ ಕೊಂದು ಹಾಕಿದ್ದರು. ಆದರೆ ಪೊಲೀಸರಿಗೆ ಲಂಚ ಕೊಡಲು ನಿರಾಕರಿಸಿದ್ದಕ್ಕಾಗಿ ಎನ್‍ಕೌಂಟರ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಲಂಚ ಕೇಳಿದ ಪೊಲೀಸ್ ಅಧಿಕಾರಿಯ ಹೆಸರು ಹೇಳುತ್ತೇನೆ ಎಂದು ಪುಷ್ಪೇಂದ್ರ ಹೇಳಿದ್ದಕ್ಕೆ ಪೊಲೀಸರು ಕೊಲೆ ಮಾಡಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.

ಅಖಿಲೇಶ್‍ಗೆ ಮರಳು ಮಾಫಿಯದೊಂದಿಗೆ ಸ್ನೇಹವಿದೆ ಆದ್ದರಿಂದ ಆರೋಪಿಯ ಮನೆಗೆ ಭೇಟಿ ನೀಡಿದ್ದಾರೆಂದು ಬಿಜೆಪಿ ನಾಯಕ ಸಿದ್ಧಾರ್ಥ ಸಿಂಗ್ ಆರೋಪಿಸಿದರಲ್ಲದೇ, ಅಖಿಲೇಶ್‍ರನ್ನು ಯಾಕೆ ಜನರು ಚುನಾವಣೆಯಲ್ಲಿ ಯಾಕೆ ತಿರಸ್ಕರಿಸಿದರೆಂದು ಈಗ ಸ್ಪಷ್ಟವಾಗಿದೆ ಸಿಂಗ್ ಹೇಳಿದರು.