ಕೇರಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ

0
947

ಸನ್ಮಾರ್ಗ ವಾರ್ತೆ-

ತಿರುವನಂತಪುರಂ, ಡಿ. 24: ಕೇರಳದ ರಾಜಧಾನಿ ತಿರುವನಂತಪುರಂಗೆ ಖಾಸಗಿ ಕಾರ್ಯ ನಿಮಿತ್ತ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕೆಎಸ್‍ಯು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಪ್ಪುಬಾವುಟ ತೋರಿಸಿದ್ದಾರೆ. ತಿರುವನಂತಪುರಂನಿಂದ ರಾಜರಾಜೇಶ್ವರಿ ದೇವಸ್ಥಾನ ಸಂದರ್ಶನಕ್ಕಾಗಿ ಕಣ್ಣೂರಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಾಗ ಕೆಎಸ್‍ಯು ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದು ಪೊಲೀಸರು ಅವರನ್ನು ತಡೆದಿದ್ದಾರೆ.

ಸೋಮವಾರ ಕೆಎಸ್‍ಯು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಎರಡು ಕಡೆ ಯಡಿಯೂರಪ್ಪ ವಾಹನಕ್ಕೆ ಕಪ್ಪುಬಾವುಟ ತೋರಿಸಿದ್ದು ಘಟನೆಗೆ ಸಂಬಂಧಿಸಿ ಇಪ್ಪತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಜೆ ಐದು ಗಂಟೆಗೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದ ಯಡಿಯೂರಪ್ಪ ಪದ್ಮನಾಭ ಸ್ವಾಮಿ ದೇವಸ್ಥಾನ ದರ್ಶನ ಪಡೆದು ಹೊಟೇಲಿಗೆ ಹೋಗುವಾಗ ಎಎಸ್‍ಯು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ. ನಂತರ ಯಡಿಯೂರಪ್ಪರಿಗೆ ಪೊಲೀಸರು ಭಾರೀ ಭದ್ರತೆಯನ್ನು ನೀಡಿದರು. ಅವರು ದೇವಸ್ಥಾನ ದರ್ಶನಕ್ಕಾಗಿ ತಿರುವನಂತಪುರಂಗೆ ತೆರಳಿದ್ದರು.