ರೈತ ಹೋರಾಟವನ್ನು ಬೆಂಬಲಿಸಿ ಲಂಡನ್‍ನ ಬೀದಿಯಲ್ಲಿ ಸಾವಿರಾರು ಮಂದಿ: ಪೊಲೀಸರಿಂದ ಬಂಧನ

0
1052

ಸನ್ಮಾರ್ಗ ವಾರ್ತೆ

ಲಂಡನ್,ಡಿ.7: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾನೂನು ವಿರುದ್ಧ ಪ್ರತಿಭಟಿಸುವ ಭಾರತದ ರೈತರಿಗೆ ಬೆಂಬಲ ಸೂಚಿಸಿ ಹಲವಾರು ಮಂದಿ ಲಂಡನ್‍ನಲ್ಲಿ ಬೀದಿಗಿಳಿದಿದ್ದಾರೆ. ರವಿವಾರ ನಡೆದ ಪ್ರತಿಭಟನೆಯಲ್ಲಿ ಮಧ್ಯ ಲಂಡನ್‍ನ ಬೀದಿಗಳನ್ನು ಪ್ರತಿಭಟನಾಕಾರರು ವೇದಿಕೆ ಮಾಡಿಕೊಂಡರು. ಕೊರೋನ ನಿಬಂಧನಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಹಲವಾರು ಮಂದಿಯನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ನಾವು ರೈತರೊಂದಿಗಿದ್ದೇವೆ. ರೈತರೊಂದಿಗೆ ನ್ಯಾಯಯುತವಾಗಿ ವರ್ತಿಸಿರಿ ಎಂಬ ಪ್ಲೇಕಾರ್ಡ್ ಹಿಡಿದು ಪ್ರತಿಭಟನಾಕಾರರು ಓಲ್ಡಿಚ್‍ನ ಭಾರತದ ದೂತವಾಸದ ಸಮೀಪದಿಂದ ಪ್ರತಿಭಟನೆ ಆರಂಭಿಸಿ ಟ್ರಾಫಲ್‍ಗರ್ ಸ್ಕ್ವೇರಿಗೆ ರ್ಯಾಲಿ ಹೊರಟಿದ್ದಾರೆ. ಸಿಖ್ ಜನರೇ ಹೆಚ್ಚು ಪ್ರತಿಭಟನೆಯಲ್ಲಿದ್ದರು. ಕೊರೋನ ಪ್ರೊಟೊ ಕಾಲ್ ಇರುವುದರಿಂದ ಗುಂಪು ಗೂಡಬಾರದು, ಮೂವತ್ತು ಮಂದಿಗಿಂತ ಹೆಚ್ಚು ಸೇರಿದರೆ ಬಂಧಿಸಲಾಗುವುದು ಎಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದರೂ ಪ್ರತಿಭಟನಾಕಾರರು ಕಡೆಗಣಿಸಿದ್ದರು.

ಇದೇ ವೇಳೆ, ಭಾರತ ವಿರೋಧಿಗಳು ಪ್ರತಿಭಟನೆಗೆ ನೇತೃತ್ವ ನೀಡಿದ್ದಾರೆ ಎಂದು ಭಾರತದ ಹೈಕಮಿಶನರ್ ವಕ್ತಾರ ಅರೋಪಿಸಿದ್ದಾರೆ. ಅನುಮತಿಯಿಲ್ಲದೆ ಸಾವಿರಾರು ಮಂದಿ ಒಟ್ಟುಗೂಡಿರುವ ಕುರಿತು ತನಿಖೆ ನಡೆಸಬೇಕೆಂದು ಅವರು ಹೇಳಿದರು.