ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: 2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದಲ್ಲಿ ಆಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹೇಳಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಮೇರೆಗೆ ತಂಡವನ್ನು ಕಳುಹಿಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಕ್ಟೋಬರ್ 18ರಂದು ನಡೆಯಲಿರುವ ಸಾಮಾನ್ಯ ಸಭೆಗೂ ಮುಂಚಿತವಾಗಿ ರಾಜ್ಯ ಅಸೋಸಿಯೇಶನ್‍ಗಳಿಗೆ ನೀಡಿದ ವಿವರದಲ್ಲಿ ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಒಂದು ವೇಳೆ, 2023ರ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದಲ್ಲಿ 14 ವರ್ಷಗಳಲ್ಲಿ ಮೊದಲ ಐತಿಹಾಸಿಕ ಪ್ರಯಾಣವಾಗಿ ಇದು ಮಾರ್ಪಡಲಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ (ದಕ್ಷಿಣ ಆಫ್ರಿಕಾ), ಐಸಿಸಿ ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್ (ದಕ್ಷಿಣ ಆಫ್ರಿಕಾ), ಏಷ್ಯಾ ಕಪ್ (ಪಾಕಿಸ್ತಾನ) ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳಲಿದೆ. ಎರಡು ಬಾರಿಯ ಚಾಂಪಿಯನ್ ಭಾರತವು 2023 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. “ಇದು ಎಂದಿನಂತೆ ಭಾರತ ಸರ್ಕಾರದ ಅನುಮತಿಯ ಮೇರೆಗೆ ಒಳಪಟ್ಟಿರುತ್ತದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023ರಲ್ಲಿ ವಿಶ್ವಕಪ್ ನಡೆಯುತ್ತದೆ. ಬಹುಕಾಲದಿಂದ ಭಾರತ-ಪಾಕಿಸ್ತಾನ ಪಂದ್ಯ ನಡೆದಿಲ್ಲ. ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಸಹಿತ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದೇ ವೇಳೆ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಭಾರತ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಿಲ್ಲ.