ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ. 21: ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಕ್ಕೆ ವಲಸೆಯನ್ನು ನಿಷೇಧಿಸುವುದಾಗಿ ಅಮೆರಿಕ ಹೇಳಿದೆ. ವಲಸೆಗೆ ತಾತ್ಕಾಲಿಕ ನಿಷೇಧ ಹೇರಲು ತೀರ್ಮಾನಿಸಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಯಾವುದೇ ವಿಭಾಗಕ್ಕೆ ವಿನಾಯಿತಿ ಇದೆಯೇ ಎಂಬ ಕುರಿತು ಕೂಡ ಟ್ರಂಪ್ ಸೂಚನೆ ನೀಡಿಲ್ಲ.
ಅಜ್ಞಾತ ಶತ್ರುವಿನ ಸಣ್ಣ ದಾಳಿ ನಡೆದಿದೆ. ಆದ್ದರಿಂದ ಮಹಾನ್ ಅಮೆರಿಕನ್ ಪ್ರಜೆಗಳ ಸುರಕ್ಷೆಯನ್ನು ದೃಢಪಡಿಸುವ ಅಗತ್ಯವಿದೆ. ದೇಶಕ್ಕೆ ಹೊರಗಿನಿಂದ ಬರುವವರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲು ಆದೇಶ ಹೊರಡಿಸಲಾಗುವುದು ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ. ವೈರಸ್ ಹರಡುವುದು ತೀವ್ರಗೊಂಡ ಮೇಲೆ ಮೆಕ್ಸಿಕೊ, ಕೆನಡಾದಂತಹ ಗಡಿ ದೇಶಗಳಿಗೆ ಪ್ರಯಾಣಿಸುವುದಕ್ಕೆ ಅಮೆರಿಕ ನಿಯಂತ್ರಣ ವಿಧಿಸಿತ್ತು. ತನ್ನ ಅಧಿಕಾರವನ್ನು ಉಪಯೋಗಿಸಿ ಟ್ರಂಪ್ ಕಠಿಣ ನಿಯಂತ್ರಣ ಹೇರಿದ್ದರು.
ಇದರಿಂದ ಅಪ್ರಾಪ್ತ ವಯಸ್ಸಿನವರನ್ನು, ನಿರಾಶ್ರಿತರನ್ನು ದೇಶದಿಂದ ಗಡಿಪಾರುಗೊಳಿಸಲು, ಅವರನ್ನು ಹಿಂದೆ ಸರಿಯುವಂತೆ ಮಾಡಲು ಸರಕಾರಕ್ಕೆ ಸಾಧ್ಯವಾಗಲಿದೆ. ಪ್ರಜೆಗಳಿಗೆ ತಮ್ಮ ದೇಶಕ್ಕೆ ಬರುವುದಕ್ಕೆ ಮತ್ತು ಸರಕು ಸಾಗಾಟಕ್ಕೆ ಮಾತ್ರ ಈಗ ಅನುಮತಿ ಇದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












