ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ: ಡೊನಾಲ್ಡ್ ಟ್ರಂಪ್‌ರಿಂದ ಪುನಃ ಆರೋಪ

0
352

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.7: ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನಃ ಆರೋಪಿಸಿದ್ದಾರೆ. ಜೊ ಬೈಡನ್ ಗೆಲುವಿಗೆ ಚುನಾವಣಾ ಪ್ರಕ್ರಿಯೆಯನ್ನು ಬುಡಮೇಲು ಮಾಡಲಾಗಿದೆ ಎಂದು ಅವರು ಹೇಳಿದರು. ಜಾರ್ಜಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. ಸೆನೆಟ್ ಚುನಾವಣೆಯ ಭಾಗವಾಗಿ ರ್ಯಾಲಿಯಿತ್ತು. ಡೆಮಕ್ರಾಟಿಕ್ ಅಧ್ಯಕ್ಷ ಅಭ್ಯರ್ಥಿ ಜೊ ಬೈಡನ್ ಗೆದ್ದ ಜಾರ್ಜಿಯದಲ್ಲಿ ತಾನೇ ಗೆದ್ದೆ ಎಂದು ಕಿವಿಗಡಚುವ ಚಪ್ಪಾಳೆಯೊಂದಿಗೆ ಟ್ರಂಪ್ ಹೇಳಿದರು. ಜನವರಿ ಐದಕ್ಕೆ ಸೆನೆಟ್ ಚುನಾವಣೆ ನಡೆಯಲಿದ್ದು ರಿಪಬ್ಲಿಕನ್ ಅಭ್ಯರ್ಥಿಗಳ ವಿಜಯ ಖಚಿತಪಡಿಸಬೇಕೆಂದು ಟ್ರಂಪ್ ಹೇಳಿದರು. ನೀವು ಮತಹಾಕದಿದ್ದರೆ ಸೋಶಲಿಸ್ಟ್‌ಗಳು ಮತ್ತು ಕಮ್ಯುನಿಸ್ಟ್‌ರು ಗೆಲ್ಲುತ್ತಾರೆ ಎಂದು ಅವರು ಹೇಳಿದರು.