ಹಿಂದೂ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದ ಮುಸ್ಲಿಂ ಯುವಕರು: ತುಮಕೂರಿನಲ್ಲೊಂದು ಮಾನವೀಯ ಸ್ಪಂದನೆ ; ಕುಟುಂಬಸ್ಥರೇ ದೂರ ನಿಂತಾಗ ಇಡೀ ರಾತ್ರಿ ಈ ಯುವಕರು ನಮ್ಮ ಜೊತೆ ನಿಂತರು ಎಂದ ಮಗ- ವೀಡಿಯೊ

0
1778

ಸನ್ಮಾರ್ಗ ವಾರ್ತೆ

ತುಮಕೂರು ಮೇ ಕೋವಿಡ್-19 ಸೋಂಕು ತಗುಲುತ್ತದೆ ಎಂಬ ಭಯದಿಂದ ಜನರು ಯಾರನ್ನೂ ಮುಟ್ಟಲು ಸಿದ್ಧರಿಲ್ಲದ ಸಮಯದಲ್ಲಿ, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಕೊರೋನಾ ಯೋಧರು’ ಎಂದು ಗುರುತಿಸಲ್ಪಟ್ಟ 10 ಮುಸ್ಲಿಂ ಯುವಕರು ಅಗತ್ಯ ಸಹಾಯ ಮತ್ತು ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ. ಮಂಗಳವಾರ ಕೆಎಚ್‌ಬಿಯ ಕಾಲೋನಿ ಬಡ ಹಿಂದೂ ಕುಟುಂಬ 60 ವರ್ಷದ ವೃದ್ಧರೋರ್ವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.

ದೈಹಿಕವಾಗಿ ವಿಶೇಷ ಚೇತನರಾಗಿದ್ದ ನಾರಾಯಣ ರಾವ್ (60) ದರ್ಜಿ ಕೆಲಸ ಮಾಡುತ್ತಿದ್ದರು. ಅವರು ಮಂಗಳವಾರ ನಿಧನರಾದರು. ಈ ವ್ಯಾಪ್ತಿ ಪ್ರದೇಶದಲ್ಲಿ ಲಾಕ್ ಡೌನ್ ಮಾಡಲಾದ ಕಾರಣದಿಂದಾಗಿ ಕುಟುಂಬದ ಸಂಬಂಧಿಗಳಿಗೆ ಬರಲು ಸಾಧ್ಯವಾಗಲಿಲ್ಲ. ಕೆ.ಎಚ್.ಬಿ. ಕಾಲನಿಯಲ್ಲಿ COVID-19 ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಕಾಲೋನಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಮತ್ತು ಅವರ ನೆರೆಹೊರೆಯ ದಂಪತಿಗಳಿಗೂ ಕೂಡ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು.

ತನ್ನ ಸ್ನೇಹಿತ ಎಚ್.ಎನ್. ಪುನೀತ್ ಕುಮಾರ್ ರಾವ್‌ ರ ತಂದೆ ನಾರಾಯಣ ರಾವ್ ನಿಧನರಾದರು ಎಂದು ತಿಳಿದ ನಂತರ ಮೊಹಮ್ಮದ್ ಖಾಲಿದ್ ಸ್ನೇಹಿತನ ಮನೆಗೆ ಧಾವಿಸಿದರು. ಖಾಲಿದ್ ತಮ್ಮ ಕೊರೋನಾ ವಾರಿಯರ್ಸ್ ತಂಡದ ಇತರ ಸದಸ್ಯರನ್ನು ಕರೆದರು ಮತ್ತು ದುಃಖದಲ್ಲಿದ್ದ ಕುಟುಂಬಕ್ಕೆ ಸಾಂತ್ವನ ನೀಡಲು ಮುಂದಾದರು. ಇಮ್ರಾನ್, ಟಿಪ್ಪು, ಶೆರು, ಶಾರೂಕ್, ತೌಫೀಕ್, ಮನ್ಸೂರ್ ಮತ್ತು ಮೊಹಮ್ಮದ್ ಖಾಲಿದ್ ಸೇರಿದಂತೆ ಎಲ್ಲಾ ಹತ್ತು ಮುಸ್ಲಿಂ ಯುವಕರು ಮೃತ ವ್ಯಕ್ತಿಯ ಮನೆಗೆ ತೆರಳಿ ಶವವನ್ನು ಸ್ಥಳಾಂತರಿಸಲು ಮತ್ತು ಅಂತಿಮ ವಿಧಿಗಳನ್ನು ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಕುಟುಂಬಕ್ಕೆ ಸಾಂತ್ವನ ನೀಡಿದರು.

“ನಮ್ಮ ಸ್ನೇಹಿತ ಇಮ್ರಾನ್ ಕುಟುಂಬಕ್ಕೆ ರೂ. 5,000 ನೀಡಿದರು ಮತ್ತು ನಾವು ಶವವನ್ನು ಮನೆಯಿಂದ ಆಂಬುಲೆನ್ಸ್‌ಗೆ ಸಾಗಿಸಿದ್ದೇವೆ” ಎಂದು ಮುಹಮ್ಮದ್ ಖಾಲಿದ್ ದಿ ಹಿಂದೂಗೆ ಹೇಳಿದರು.

ಇದೇ ಕಾಲೋನಿಯಲ್ಲಿ ನೆಲೆಸಿದ್ದ ಮೃತರ ಕಿರಿಯ ಸಹೋದರ ಮತ್ತು ಅವರ ಇಬ್ಬರು ಗಂಡು ಮಕ್ಕಳು (ಸೋದರಳಿಯರು) ಕೊರೋನಾ ಸೋಂಕಿಗೆ ತುತ್ತಾಗುವ ಭಯದಿಂದ ಕೊನೆಯ ವಿಧಿಗಳನ್ನು ಏರ್ಪಡಿಸಲು ಅಥವಾ ಇಲ್ಲಿಗೆ ಬರಲು ಸಿದ್ಧರಿರಲಿಲ್ಲ ಎಂದು ಅವರು ಹೇಳಿದರು.

ನಾಲ್ಕು ದಿನಗಳ ಹಿಂದೆ ನಾರಾಯಣ ರಾವ್ ಅವರಿಗೆ COVID-19 ಪರೀಕ್ಷೆ ನಡೆಸಿದ್ದು ವರದಿ ನೆಗೆಟಿವ್ ಆಗಿದೆ ಎಂದು ಮನವರಿಕೆ ಮಾಡುವ ಮೂಲಕ ಮೃತರ ಮನೆಗೆ ಬಂದು ಅಂತಿಮ ವಿಧಿಗಳನ್ನು ನೆರವೇರಿಸಲು ಮನವೊಲಿಸಿದೆವು ಎಂದು ಅವರು ಹೇಳಿದರು. ಶವಾಗಾರಕ್ಕೂ ತೆರಳುವ ಮೂಲಕ ನಮ್ಮಿಂದಾದಷ್ಟು ನೆರವನ್ನು ನಾವು ನೀಡಲು ಬಯಸಿದ್ದೆವು. ಆದರೆ ಸೀಲ್ ಡೌನ್ ಮಾಡಲಾದ ಪ್ರದೇಶದಲ್ಲಿದ್ದ ಕಾರಣ ಹೋಗಲಿಲ್ಲ. ತಮಗೆ ಸಹಕಾರವನ್ನು ನೀಡಿದ ಜಿಲ್ಲಾಡಳಿತಕ್ಕೆ ಅವರು ಧನ್ಯವಾದ ಅರ್ಪಿಸಿದರು.

“ನನ್ನ ಮುಸ್ಲಿಂ ಸಹೋದರರು ನಮಗೆ ಸಹಾಯ ಮಾಡಿದರು ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ಅವರು ನಮಗೆ ಭರವಸೆ ನೀಡಿದರು ಮತ್ತು ಇಡೀ ರಾತ್ರಿ ನಮ್ಮೊಂದಿಗೆ ಸಾಂತ್ವನ ನೀಡುತ್ತಲೇ ಇದ್ದರು ಎಂದು ಪುನೀತ್ ಕುಮಾರ್ ದಿ ಹಿಂದೂಗೆ ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.