ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಮಹಾಸಭೆ

0
268

ಸನ್ಮಾರ್ಗ ವಾರ್ತೆ

ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ ವಾರ್ಷಿಕ ಮಹಾಸಭೆಯು ಡಿಸೆಂಬರ್ 1 ರಂದು ಅಪರಾಹ್ನ ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಇಬ್ರಾಹೀಮ್ ಸಯೀದ್ ಉಮರಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೊಸೈಟಿಯ ನಿರ್ದೇಶಕರಾದ ನಿಸಾರ್ ಅಹ್ಮದ್ ಸ್ವಾಗತ ಕೋರಿದರು. ನಿರ್ದೇಶಕ ಜಿ. ಶುಐಬ್ ಅಹ್ಮದ್ ಮಲ್ಪೆ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು. ನಿರ್ದೇಶಕ ಅನ್ವರ್ ಅಲಿ ಕಾಪು ವಾರ್ಷಿಕ ವರದಿಯನ್ನು ಓದಿದರು. ಕಾರ್ಯದರ್ಶಿ ಆರಿಫ್ ಕಾಶಿಮ್ ಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಮಾಡಿದರು.

ಮುಖ್ಯ ಸಲಹೆಗಾರರಾದ ನರಸಿಂಹ ಸ್ವಾಮಿ ಆಯವ್ಯಯ ಪತ್ರದ ಮಂಡನೆ ಮಾಡಿದರು. ಉಪಾಧ್ಯಕ್ಷರಾದ ಸಲಾಹುದ್ದೀನ್ ಸಾಹೆಬ್ ಲೆಕ್ಕ ಪರಿಶೋಧಕರ ನೇಮಕ ಬಗ್ಗೆ ವಿಚಾರವನ್ನಿತ್ತರು. ಸಭಾಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳೂ ಚರ್ಚಿಸಲ್ಪಟ್ಟವು. ಸೊಸೈಟಿಯ ಅಧ್ಯಕ್ಷರಾದ ಅಕ್ಬರ್ ಅಲಿ ಉಡುಪಿ ಸಮಾರೋಪ ನುಡಿಗಳನ್ನಾಡಿದರು. ನಿರ್ದೇಶಕರಾದ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಕೊನೆಯಲ್ಲಿ ಧನ್ಯವಾದವಿತ್ತರು. ನಿರ್ದೇಶಕ ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.