ಸನ್ಮಾರ್ಗ ವಾರ್ತೆ
ಉಡುಪಿ: ಸಾಮಾಜಿಕ ಕಾರ್ಯಕರ್ತ, ನಾಯರ್‌ಕೆರೆ ಹಾಶಿಮಿ ಮಸೀದಿಯ ಕಾರ್ಯದರ್ಶಿಯಾಗಿದ್ದ ಫಿರೋಝ್ ಮನ್ನಾರವರು ಹೃದಯಾಘಾತದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 67ವರ್ಷ ವಯಸ್ಸಾಗಿತ್ತು.
ಮೃತರು ಹಾಶಿಮಿ ಮಸೀದಿ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತರಾಗಿದ್ದು, ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸನ್ಮಾರ್ಗ ವಾರಪತ್ರಿಕೆಯ ಚಂದಾದಾರಿಕೆ ಅಭಿಯಾನಗಳಲ್ಲಿ ಸದಾ ಮುತುವರ್ಜಿ ವಹಿಸುತ್ತಿದ್ದರು.
ಮೃತರು ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.












