ಉಜ್ಜಯಿನಿ ಮಸೀದಿ ಮೂರು ಅಡಿ ಮಸೀದಿ ಭಾಗವನ್ನು ಕೆಡವಲು ಆಡಳಿತ ಸಮಿತಿ ನಿರ್ಧಾರ

0
349

ಸನ್ಮಾರ್ಗ ವಾರ್ತೆ

ರಸ್ತೆ ಅಗಲೀಕರಣ ಯೋಜನೆಗಾಗಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಐತಿಹಾಸಿಕ ಶಾಹಿ ಮಸೀದಿಯ ಪ್ರಸ್ತಾವಿತ ಮೂರು ಅಡಿ ಭಾಗವನ್ನು ಮಸೀದಿಗೆ ಸಂಬಂಧಿಸಿದವರು ಸ್ವಯಂ ಪ್ರೇರಿತವಾಗಿ ಕೆಡವಿ ಹಾಕಿ ವಿವಾದವನ್ನು ಮೌಖಿಕವಾಗಿ ಪರಿಹರಿಸಿದ್ದಾರೆ. ಬುಲ್ಡೋಜರ್ ಬಳಸಿ ಮಸೀದಿಯನ್ನು ಕೆಡವದಂತೆ ತಡೆಯಲು ನೂರಾರು ಮುಸ್ಲಿಮರು ಮಸೀದಿಯ ಒಳಗೆ ಮತ್ತು ಹೊರಗೆ ಮೊಕ್ಕಾಮ್ ಹೂಡಿದ್ದರು. ಮೂರು ರಾತ್ರಿ ಸಾಮೂಹಿಕ ರಾತ್ರಿ ಜಾಗರಣೆ ಮಾಡಿದ್ರು.

ಮಸೀದಿ ಆಡಳಿತವು ಸೆಪ್ಟೆಂಬರ್ 27ರಂದು ಒಂದು ನಿರ್ಧಾರಕ್ಕೆ ಬಂದು ತಾವೇ 3 ಅಡಿ ಮಸೀದಿ ಭಾಗವನ್ನು ತೆರವುಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇದರ ಮಧ್ಯೆ ಮಸೀದಿಯ ಹೊರಗೆ ಜಮಾಯಿಸಿದ ಜನರೊಂದಿಗೆ ಪೊಲೀಸರು ಘರ್ಷಣೆ ನಡೆಸಿದರು. ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಿದರು.

ಸರ್ಕಾರದ ಬೇಡಿಕೆಯಂತೆ ಮಸೀದಿಯ ಎಂಟು ಅಡಿ ಜಾಗವನ್ನು ನಾವು ನೀಡುವುದಿಲ್ಲ ಎಂದು ಮಸೀದಿ ಆಡಳಿತ ಸಮಿತಿ ನಿರ್ಧರಿಸಿತು. ಆದರೆ ಪ್ರಾರ್ಥನೆ ನಡೆಯದ ಮೂರು ಅಡಿ ಜಾಗವನ್ನು ಕೆಡವಲು ಒಪ್ಪಿಕೊಂಡಿತು. ಇದರಂತೆ ಮಸೀದಿಯ ಮೀನಾರ ಕೂಡ ತೆರವುಗೊಳ್ಳುವ ಭಾಗದಲ್ಲಿ ಸೇರಿದೆ.

ನಿರ್ಧಾರದಂತೆ ಮಸೀದಿಯಲ್ಲಿ ತಂಗಿದ್ದ ಜನರು ಬೆಳಿಗ್ಗೆ ಮನೆಗೆ ಹೋದರು. ಆದರೆ ಆ ಬಳಿಕ ಈ ಒಪ್ಪಂದವನ್ನು ಆಡಳಿತ ಉಲ್ಲಂಘಿಸುತ್ತದೆ ಅನ್ನುವ ಸೂಚನೆ ಸಿಕ್ಕಿತು. ಮಸೀದಿಯ ಸುತ್ತಲೂ ಆಡಳಿತ ಬ್ಯಾರಿಕೇಡ್ ಸ್ಥಾಪಿಸಿತು. ಇದು ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಶ್ರಮಿಸುತ್ತಿದೆ ಎಂಬ ಸುದ್ದಿಗೆ ಕಾರಣವಾಯಿತು. ಇದರೊಂದಿಗೆ ಜನರು ಮರಳಿ ಮಸೀದಿಗೆ ಬಂದರು. ಈ ಹಿನ್ನೆಲೆಯಲ್ಲಿ ವಾಗ್ವಾದ ಮತ್ತು ಘರ್ಷಣೆ ನಡೆಯಿತು ಎಂದು ವರದಿಯಾಗಿದೆ.

ನಾವೇ ಆ ಭಾಗಗಳನ್ನು ತೆಗೆದು ಹಾಕಬೇಕೆಂದು ನಿರ್ಧರಿಸಿದೆವು. ಹಾಗಾದರೆ ಬುಲ್ಡೋಜರ್‌ಗಳು ಏಕೆ ಬಂದುವು,ಆಡಳಿತವು ನಮ್ಮನ್ನು ವಂಚಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.