ಟೆಂಪಲ್ ಮೌಂಟ್‍ನ ಯಹೂದಿ ಸಂಬಂಧ ತಿರಸ್ಕರಿಸಿ ವಿಶ್ವಸಂಸ್ಥೆಯಿಂದ ಪ್ರಸ್ತಾವ

0
325

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಜೆರುಸಲೇಮ್‍ನ ಟೆಂಪಲ್ ಮೌಂಟ್‍ನ ಯಹೂದಿ ಸಂಬಂಧವನ್ನು ತಿರಸ್ಕರಿಸಿ ವಿಶ್ವಸಂಸ್ಥೆ ಪ್ರಸ್ತಾವ ಪಾಸು ಮಾಡಿದೆ. ಬುಧವರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟೆಂಪಲ್ ಮೌಂಟ್‍ಗೆ ‘ಅಲ್ ಹರಂ ಅಲ್ ಶರೀಫ್’ ಎಂದು ಉದ್ಧರಿಸಿತ್ತು. ಹರಂ ಅಲ್ ಶರೀಫ್‍ನ ಐತಿಹಾಸಿಕವಾಗಿರುವ ಯಥಾಸ್ಥಿತಿ ಮುಂದುವರಿಸಲು ಪ್ರಸ್ತಾವ ಆಗ್ರಹಿಸಿದೆ. ಜೊತೆಗೆ ಜೆರುಸಲೇಮ್‌ನಲ್ಲಿ ಇಸ್ರೇಲಿನ ನಿರ್ಮಾಣಗಳೂ ಕಾನೂನು ಬಾಹಿರ ಮತ್ತು ಅನಧಿಕೃತವೆಂದು ಸೂಚಿಸಲಾಗಿದೆ.

ವಿಶ್ವಸಂಸ್ಥೆಯ 129 ಸದಸ್ಯ ರಾಷ್ಟ್ರಗಳು ಪ್ರಸ್ತಾವವನ್ನು ಬೆಂಬಲಿಸಿದೆ. ಹನ್ನೊಂದು ದೇಶಗಳು ವಿರೋಧಿಸಿ ಮತ ಹಾಕಿವೆ. ಭಾರತ, ಆಸ್ಟ್ರೀಯ ಬ್ರಝಿಲ್, ಜರ್ಮನಿ, ಕೆನ್ಯ, ನೆದರ್‍ಲೆಂಡ್, ಉಕ್ರೇನ್, ಇಂಗ್ಲೆಂಡ್ ಸಹಿತ 31 ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ.