ಸನ್ಮಾರ್ಗ ವಾರ್ತೆ
ಗಲ್ಫ್ ಸಹಕಾರ ಮಂಡಳಿಯ ಆರು ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ತಡೆಯಿಲ್ಲದೆ ಯಾತ್ರೆ ಮಾಡಬಹುದಾದ ಏಕೀಕೃತ ಟೂರಿಸ್ಟ್ ವಿಸಾ ಶೀಘ್ರದಲ್ಲೇ ಜಾರಿಯಾಗಲಿದೆ.
ಬಹರೇನ್ ಕುವೈತ್ ಒಮಾನ್ ಕಥರ್ ಸೌದಿ ಅರೇಬಿಯಾ ಮತ್ತು ಯುಎಇಗಳು ಏಕೀಕೃತ ವೀಸಾಗಳ ಪಟ್ಟಿಯಲ್ಲಿರುವ ರಾಷ್ಟ್ರಗಳಾಗಿವೆ . ಈ ವೀಸಾದ ಅಧಿಕೃತ ಘೋಷಣಾ ದಿನಾಂಕವನ್ನು ಸ್ಪಷ್ಟಪಡಿಸಲಾಗಿಲ್ಲ. ಆದರೆ ಶೀಘ್ರವೇ ಈ ಘೋಷಣೆಯನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರಾದೇಶಿಕ ಟೂರಿಸಂ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಬಹಳ ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ. ಇದನ್ನು ಜಿಸಿಸಿ ವಿಸಾ ಎಂದು ಕರೆಯಲಾಗುತ್ತದೆ. ಜಿಸಿಸಿಯ ವಿವಿಧ ರಾಷ್ಟ್ರಗಳ ವಿಸಾವನ್ನು ಪಡೆಯದೆ ಆಯಾ ರಾಷ್ಟ್ರಗಳಿಗೆ ಯಾತ್ರೆ ಹೋಗುವುದಕ್ಕೆ ಈ ವಿಸಾದಿಂದ ಸಾಧ್ಯವಾಗಲಿದೆ.












