ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.28: ಕೊರೋನ ಹೆಚ್ಚುತ್ತಿರುವ ಸೂಚನೆಗಳಿದ್ದರೂ ದೇಶದಲ್ಲಿ ಐದನೇ ಹಂತದ ಸಡಿಲಿಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಹಬ್ಬದ ಸೀಝನ್ ಆರಂಭಗೊಳ್ಳುತ್ತಿರುವ ಅಕ್ಟೋಬರ್‌ನಿಂದ ಹೆಚ್ಚು ಸಡಿಲಿಕೆ ಅನ್‍ಲಾಕ್ 5 ಜಾರಿಗೆ ಸರಕಾರ ಸಜ್ಜಾಗಿದೆ.
ಇದರೊಂದಿಗೆ ಸಿನೆಮಾ ಥಿಯೇಟರ್, ಪ್ರವಾಸಿ ಕೇಂದ್ರ , ಅನ್‍ಲಾಕ್ 5ರಲ್ಲಿ ತೆರದುಕೊಳ್ಳಲಿದೆ. ನಾಲ್ಕನೆ ಹಂತದ ಸಡಿಲಿಕೆಯಲ್ಲಿ ಮೆಟ್ರೋ ರೈಲುಗಳು, ನೂರು ಮಂದಿಗಿಂತ ಹೆಚ್ಚು ಜನರಿಲ್ಲದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿತ್ತು.
ಸಿನೆಮಾ ಪ್ರದರ್ಶನ, ಸಹಿತ ಮುಚ್ಚಿದ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿಯಿರಲಿಲ್ಲ. ಇದಕ್ಕೆ ಸಂಬಂಧಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಘಟನೆ ನಿರಂತರ ಬೇಡಿಕೆ ಇಟ್ಟಿತ್ತು. ಇದನ್ನು ಕೇಂದ್ರ ಸರಕಾರ ಅಂಗೀಕರಿಸುವ ಸಾಧ್ಯತೆ ಇದೆ. ಓಪನ್ ಏರ್ ಥಿಯೇಟರ್‍ಗಳಿಗೆ ಸೆಪ್ಟಂಬರಿನಲ್ಲಿಯೇ ಅನುಮತಿ ನೀಡಲಾಗಿತ್ತು.
ನಿರ್ದಿಷ್ಟ ಜನರಿಂದ ಅಕ್ಬೋಬರ್ 1ರ ನಂತರ ರಾಜ್ಯದಲ್ಲಿ ಸಿನೆಮಾ ಥಿಯೇಟರ್‌ಗಳು ಪ್ರಾರಂಭಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಸರಕಾರ ಈಗಾಗಲೇ ಘೋಷಿಸಿದೆ. ಮಾನದಂಡ ಪಾಲಿಸಿ ಸಂಗೀತ-ನೃತ್ಯ-ನಾಟಕಗಳಂತಹ ಮನರಂಜನೆಗೆ ಅನುಮತಿ ನೀಡಲಾಗುವುದು.
ಸರಿಯಾದ ಆಸನ, ಅಂತರ ಪಾಲಿಸಿಯೇ ಥಿಯೇಟರ್‌ಗಳು ಆರಂಭಿಸಲು ಕೇಂದ್ರ ಸರಕಾರ ಅನುಮತಿ ನೀಡಲಿದೆ ಎಂದು ತಿಳಿಯಲಾಗಿದೆ. ಉತ್ತರಾ ಖಂಡ, ಒಡಿಸ್ಸಾ, ಕೇರಳ, ಸಿಕ್ಕಿಂ ಮೊದಲಾದ ರಾಜ್ಯಗಳಲ್ಲಿ ಅಕ್ಟೋಬರ್‌ನಿಂದ ಪ್ರವಾಸೋದ್ಯಮ ಆರಂಭವಾಗುವ ಸೂಚನೆ ಲಭ್ಯವಾಗಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












