ಉತ್ತರ ಪ್ರದೇಶ: ಗದ್ದೆಯಲ್ಲಿ ದಲಿತ ಯುವತಿಯ ಮೃತದೇಹ ಪತ್ತೆ; ಅತ್ಯಾಚಾರ, ಕೊಲೆ ಶಂಕೆ

0
1246

ಸನ್ಮಾರ್ಗ ವಾರ್ತೆ

ಲಕ್ನೊ,ಅ.16: ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯ ಕೊಲೆ ನಡೆದಿದ್ದು ಕೊರಳಿಗೆ ಬಟ್ಟೆ ಸುತ್ತಿದ ಸ್ಥಿತಿಯಲ್ಲಿ ಹದಿನೇಳು ವರ್ಷದ ಬಾಲಕಿಯ ಮೃತದೇಹ ಗದ್ದೆಯಲ್ಲಿ ಪತ್ತೆಯಾಗಿದೆ. ಲಕ್ನೋ ಸಮೀಪದ 40 ಕಿಲೊ ಮೀಟರ್ ದೂರದ ಬಾರಬಂಕಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಕೊರೊಳು ಹಿಸುಕಿ ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ಬಾರಬಂಕಿ ಎಸ್ಪಿ ಆರ್‍ಎಸ್ ಗೌತಮ್ ತಿಳಿಸಿದ್ದಾರೆ. ಗದ್ದೆಗೆ ಕಟಾವಿಗೆ ಹೋದ ಬಾಲಕಿ ನಂತರ ಹತ್ಯೆಯಾಗಿ ಪತ್ತೆಯಾಗಿದ್ದಳು. ಬಟ್ಟೆಗಳನ್ನು ಹರಿದು ಹಾಕಲಾಗಿತ್ತು. ಬಾಲಕಿಯದೇ ಶರ್ಟ್ ಉಪಯೋಗಿಸಿ ಕೊರಳಿಗೆ ಕಟ್ಟಲಾಗಿತ್ತು ಎಂದು ಎಸ್ಪಿ ತಿಳಿಸಿದರು.

ಮೃತದೇಹದಲ್ಲಿ ಅರ್ಧ ಬಟ್ಟೆ ಮಾತ್ರ ಇತ್ತು. ಬಾಲಕಿಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದು ಇದುವರೆಗೆ ಪೊಲೀಸರು ಪೋಸ್ಟ್ ಮಾರ್ಟಂ ವರದಿಯನ್ನು ಕೊಟ್ಟಿಲ್ಲ. ಘಟನೆಯಲ್ಲಿ ಇಬ್ಬರು ಶಂಕಿತ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬಾರಬಂಕಿಯಲ್ಲಿ ಅಹಿತಕರ ಘಟನೆಗಳಾಗದಂತೆ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.