ಉತ್ತರಪ್ರದೇಶ: ಮೈದಾನದಲ್ಲಿ ಈದ್ ನಮಾಝ್ ಮಾಡಿದ್ದಕ್ಕೆ 11 ಮಂದಿ ಬಂಧನ

0
126

ಸನ್ಮಾರ್ಗ ವಾರ್ತೆ

ಲಕ್ನೊ: ಬಯಲು ಮೈದಾನದಲ್ಲಿ ಈದ್ ನಮಾಝ್ ಮಾಡಿದ್ದೇ ಪೊಲೀಸರಿಗೆ ಅಪರಾಧವಾಗಿದೆ. ಉತ್ತರಪ್ರದೇಶದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಈದ್ ಗಾಹ್ ಇಲ್ಲದಿದ್ದರಿಂದ ಅವರು ಗ್ರೌಂಡಿನಲ್ಲಿ ಈದ್ ನಮಾಝ್ ಮಾಡಿದ್ದರು. ಇವಿಷ್ಟಕ್ಕೆ ಖುಶಿನಗರ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.


ಸ್ಥಳೀಯ ಮುಸ್ಲಿಮರು ಹೇಳುವ ಪ್ರಕಾರ ಈದ್ ನಮಾಝ್ ಶಾಂತಿ ಪೂರ್ಣವಾಗಿ ನಡೆದಿತ್ತು. ಇದಾಗಿ ಕೆಲವು ದಿನಗಳ ನಂತರ ಜೂನ್ 19ಕ್ಕೆ ಅರೆಸೈನಿಕ ಪಡೆಯ ಪೊಲೀಸರು ಮನೆಗಳಿಗೆ ನುಗ್ಗಿ ಕೆಲವರನ್ನು ಎತ್ತಿಕೊಂಡು ಹೋಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಯೋಗಿಯ ಬಿಜೆಪಿಯನ್ನು ಉತ್ತರಪ್ರದೇಶದ ಜನರು ತಿರಸ್ಕರಿಸಿದ್ದು. ಇದಕ್ಕಾಗಿ ಮುಸ್ಲಿಮರ ಮೇಲೆ ಸೇಡಿನ ಕ್ರಮವನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ

ಪೊಲೀಸರು ಹೇಳುವುದು: ಅಲ್ಲಿ ಈದ್ ನಮಾಝ್ ನಡೆಯುತ್ತಿದೆ ಎಂದು ಫೋನ್ ಕರೆ ಬಂತು. ಇದರ ಕುರಿತು ತನಿಖೆ ನಡೆಸಿದೆವು. ಸ್ಥಳ ಗ್ರಾಮ ಸಭೆಯದ್ದೆಂದು ಗೊತ್ತಾಗಿದೆ. ಇಲ್ಲಿ ಈದ್‍ಗಾಹ್ ಮಾಡಲು ಕೆಲವು ಮುಸ್ಲಿಮರು ಸ್ವಲ್ಪ ಜಮೀನು ಕೊಡಿ ಎಂದಿದ್ದರು. ಅನುಮತಿ ಪಡೆಯದೆ ನಮಾಝ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿ ಒಂದು ಗಂಟೆಗೆ ಮನೆಯೊಳಗೆ ಬಂದು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ಇದೆ.