ಪ್ರಧಾನಿ ವಿರುದ್ಧ ವೀಡಿಯೊ: ಉತ್ತರಪ್ರದೇಶದಲ್ಲಿ ಯುವಕನ ಬಂಧನ

0
501

ಸನ್ಮಾರ್ಗ ವಾರ್ತೆ

ಲಕ್ನೊ: ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಟ್ವಿಟರ್‌ನಲ್ಲಿ ವೀಡಿಯೊ ಟ್ವೀಟ್ ಮಾಡಿದ ಉತ್ತರ ಪ್ರದೇಶದ ಬುಲಂದರ್ ಶಹರ್‌ನ ಸಲೀಂ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಸಲೀಂ ಖಾನ್ ಮೋದಿಯ ವಿರುದ್ಧ ವೀಡಿಯೊ ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಸೈಬರ್ ಸೆಲ್‍ಗೆ ದೂರು ಬಂದಿತ್ತು. ನಂತರ ಗ್ರಾಮೀಣ ಠಾಣೆಯ ಪೊಲೀಸರು ಬಂದಿಸಿದ್ದರು.

ನವೆಂರ್ 14ರಂದು ಸೈಬರ್ ಪೊಲೀಸರಿಗೆ ದೂರು ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನವೆಂಬರ್ ಹದಿನೈದರನ್ನು ಸಲೀಂ ಖಾನ್‍ನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.