ಉಯಿಘುರ್ ಮುಸ್ಲಿಮರ ಮಾನವ ಹಕ್ಕುಗಳ ಉಲ್ಲಂಘನೆ: ಬೀಜಿಂಗ್ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕಲಿರುವ ಅಮೆರಿಕ

0
445

ಸನ್ಮಾರ್ಗ ವಾರ್ತೆ

ಬೀಜಿಂಗ್: ಉಯಿಘುರ್ ಮುಸ್ಲಿಮರ ವಿರುದ್ಧ ಮಾನವಹಕ್ಕು ಉಲ್ಲಂಘನೆಗಳನ್ನು ಪ್ರತಿಭಟಿಸುವ ಸಲುವಾಗಿ 2022ರಲ್ಲಿ ಬೀಜಿಂಗ್‍ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನ್ನು ಹಿಷ್ಕರಿಸಲಾಗುವುದು ಎಂದು ಅಮೆರಿಕ ತಿಳಿಸಿದೆ.

ರಾಜತಾಂತ್ರಿಕ ಪ್ರತಿನಿಧಿಗಳನ್ನು ಚೀನಕ್ಕೆ ಕಳುಹಿಸುವುದಿಲ್ಲ ಎಂದು ಅಮೆರಿಕ ಹೇಳಿತು. ಚೀನದ ಶಿಂಜಿಯಾಂಗ್ ಪ್ರಾಂತದ ಉಯಿಘುರ್ ಮುಸ್ಲಿಮರ ವಿರುದ್ಧ ನಡೆಸಲಾಗುವ ದಾಳಿಗಳ ಸಹಿತ ಮಾನವಹಕ್ಕು ಉಲ್ಲಂಘನೆಗಾಗಿ ಅಮೆರಿಕ ಕ್ರಮಕೈಗೊಳ್ಳಲು ಮುಂದಾಯಿತು.

ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಜೆನ್ ಪಸ್ಕಿ, ಬೀಜಿಂಗ್ ಒಲಿಂಪಿಕ್ಸ್ ಬಹಿಷ್ಕಾರದ ಕುರಿತ ಮಾಹಿತಿ ನೀಡಿದರು. ಒಲಿಂಪಿಕ್ಸ್‌ಗೆ ಬೈಡನ್ ಸರಕಾರ ರಾಜತಾಂತ್ರಿಕ-ಅಧಿಕೃತ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಅವರು ತಿಳಿಸಿದರು.

ಶಿಂಜಿಯಾಂಗ್ ಪ್ರಾಂತ್ಯದಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರತಿಭಟನಾರ್ಥ ಹೀಗೆ ಮಾಡಲಾಗುತ್ತಿದೆ ಎಂದರು. ಬಹಿಷ್ಕರಿಸಬೇಕೆಂದು ಅಮೆರಿಕ ಪ್ರತಿನಿಧಿ ಸಭೆ ಕಾಂಗ್ರೆಸ್‍ನಲ್ಲಿ ಕೆಲವರು ಬೇಡಿಕೆ ಇಟ್ಟಿದ್ದರು. ಆದರೆ,‌ ಅಮೆರಿಕ ರಾಜಕೀಯ ಪ್ರೇರಿತ ಎಂದು ಚೀನದ ದೂತವಾಸ ಹೇಳಿತು. ಈ ತೀರ್ಮಾನ ಒಲಿಂಪಿಕ್ಸ್‌ಗೆ ಅಡ್ಡಿಯಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು.