ಕೊರೊನಾಕ್ಕೆ ಮಲೇರಿಯ ಮದ್ದುಕೊಡಲು ಆರಂಭಿಸಿದ ಅಮೆರಿಕ

0
513

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ.10: ಕೊರೊನಾ ಚಿಕಿತ್ಸೆಗೆ ಭಾರತದಿಂದ ತರಿಸಿಕೊಂಡ ಮಲೇರಿಯ ಔಷಧ ಹೈಡ್ರೊಕ್ಸಿಕ್ಲೊರಕ್ವಿನ್‍ ಅನ್ನು ಪರೀಕ್ಷಿಸಲು ಅಮೇರಿಕ ತೊಡಗಿದೆ. ಟೆನ್ನಿಸ್ ನ್ಯಾಶ್ ವಿಲ್ಲಾದ ವಂಡರ್‍ಬರ್ಗ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ರೋಗಿಗಳ ಮೇಲೆ ಮೊದಲು ಪರೀಕ್ಷೆ ಆರಂಭಿಸಿದೆ. ರೋಗಿಗಳಿಗೆ ಇದರಿಂದ ಎಷ್ಟು ಪ್ರಯೋಜನ ಆಗುತ್ತದೆ ಎಂದು ನೋಡುವ ಉದ್ದೇಶವಿದೆ ಎಂಬುದಾಗಿ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ತಿಳಿಸಿದೆ. ರೋಗಿಗಳಿಗೆ ಹೈಡ್ರೊಕ್ಸಿಕ್ಲೊರಾಕ್ವಿನ್ ಔಷಧ 400 ಮಿಲಿಗ್ರಾಂನಂತೆ ಎರಡು ಸಲ ದಿನಾಲೂ ನೀಡಲಾಗುತ್ತಿದೆ. ನಂತರ 200 ಮಿಲಿಗ್ರಾಂ ಎರಡು ಸಲ ಐದು ದಿವಸ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ 4,68,566 ಮಂದಿ ಕೊರೊನಾ ಪೀಡಿತರಿದ್ದಾರೆ. 16,691 ಮಂದಿ ಮೃತಪಟ್ಟಿದ್ದಾರೆ. 25,928 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ನ್ಯೂಯಾರ್ಕ್‍ನಲ್ಲಿ ಅತಿಹೆಚ್ಚು 1,61,504 ಕೊರೊನಾ ರೋಗಿಗಳಿದ್ದಾರೆ. ನ್ಯೂಜೆರ್ಸಿಯಲ್ಲಿ 51027, ಮಿಚಿಗನ್‍ನಲ್ಲಿ 21504, ಕ್ಯಾಲಿಪೋರ್ನಿಯಲ್ಲಿ 19,971 ಅತಿಹೆಚ್ಚು ಕೊರೊನಾ ರೋಗಿಗಳನ್ನು ಹೊಂದಿರುವ ಅಮೆರಿಕದ ರಾಜ್ಯಗಳಿವು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.