ಸೆಪ್ಟಂಬರ್ 11ರೊಳಗೆ ಎಲ್ಲ ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಲಾಗುವುದು: ಅಮೇರಿಕಾ ಅಧ್ಯಕ್ಷ ಜೊ ಬೈಡನ್

0
376

ಸನ್ಮಾರ್ಗ ವಾರ್ತೆ

ಕಾಬೂಲ್: ಬಹುಕಾಲದಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಸೈನ್ಯದ ಹಿಂತೆರಳುವಿಕೆ ಅಫ್ಘಾನಿಸ್ತಾನದಲ್ಲಿ ಇನ್ನೊಂದು ದಾಳಿಗೆ ಕಾರಣವಾಲಿದೆಯೇ ಎಂದು ಸೂಚನೆಗಳು ಬರುತ್ತಿವೆ. ಮುಂದಿನ ಸೆಪ್ಟಂಬರ್ 11ರೊಳಗೆ ಎಲ್ಲ ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಲಾಗುವುದು ಎಂದು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.

ಆದರೆ, ಅಮೆರಿಕದ ಸೈನ್ಯ ಮರಳುವುದರೊಂದಿಗೆ ಗಟ್ಟಿಯಾಗಲಿರುವ ತಾಲಿಬಾನ್ ಕಾಬೂಲ್ ಮುಂತಾದ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯಲಿದೆ ಎನ್ನುವ ಬೆದರಿಕೆ ತಲೆದೋರಿ ನಿಂತಿದೆ. ಈಗ ಅಮೆರಿಕದ ಸೈನಿಕರ ಹಿಂತೆರಳುವಿಕೆ ನಡೆಯುತ್ತಿದ್ದು ಇದಾದ ನಂತರ ಅಫ್ಘಾನಿಸ್ತಾನದ ಅಧಿಕೃತ ಸರಕಾರಕ್ಕೆ ಸೈನಿಕ ಸಹಾಯ ನೀಡುವ ವ್ಯವಸ್ಥೆ ಅಮೆರಿಕ ಒದಗಿಸಿಲ್ಲ. ಆದರೆ, ತಾಲಿಬಾನ್ ಅಫ್ಘಾನಿಸ್ತಾನದ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದರೆ ಆ ನಂತರ ಅಮೆರಿಕಕ್ಕೆ ಸೈನಿಕ ಕಾರ್ಯಾಚರಣೆ ನಡೆಸದೆ ಬೇರೆ ದಾರಿ ಇರುವುದಿಲ್ಲ ಎಂದು ಪೆಂಟಗಾನ್ ಹೇಳಿದೆ.

ಆಗ ಅಮೆರಿಕ ಬಾಂಬರ್ ವಿಮಾನಗಳು ಮತ್ತು ಡ್ರೋಣ್ ಬಳಸಲಿದೆ. ಈಗ ಅಫ್ಘಾನಿಸ್ತಾನದ ಗ್ರಾಮ ಪ್ರದೇಶಗಳನ್ನು ತಾಲಿಬಾನ್ ನಿಯಂತ್ರಿಸುತ್ತಿದೆ. ಇಲ್ಲಿಗೆ ಅಧಿಕೃತ ಸರಕಾರಕ್ಕೆ ಪ್ರವೇಶವಿಲ್ಲ. ಇದು ಇನ್ನುಳಿದ ಭಾಗಗಳಿಗೂ ಹರಡಿದರೆ ದೇಶ ಇಡೀ ನಿಯಂತ್ರಣ ತಾಲಿಬಾನ್‍ಗಾಗಲಿದೆ.

ಈಗ ಸೈನಿಕ ವಾಪಸಾತಿ ಜೊತೆಗೆ ಹಲವು ವರ್ಷಗಳಿಂದ ಅಮೆರಿಕದ ಸೇನೆಗೆ ಸಹಾಯ ಮಾಡಿದವರನ್ನು ಕರೆದುಕೊಂಡು ಹೋಗುವುದು ಅಮೆರಿಕಕ್ಕೆ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಅವರನ್ನು ತಾಲಿಬಾನ್ ಸುಮ್ಮನೆ ಬಿಡಲಾರದು ಎಂಬ ಆತಂಕವಿದೆ ಮನೆಮಾಡಿದೆ.