ತಿರುಪತಿ ಲಡ್ಡುವಿನಲ್ಲಿ ಹಂದಿ ಮತ್ತು ಗೋವಿನ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಕೆ; ಆರೋಪ ತಳ್ಳಿ ಹಾಕಿದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್

0
57

ಸನ್ಮಾರ್ಗ ವಾರ್ತೆ

ತಿರುಪತಿ ದೇವಾಲಯದಲ್ಲಿ ಪ್ರಸಾದವಾಗಿ ನೀಡುವ ಲಾಡು ಚರ್ಚೆಯಲ್ಲಿದೆ. ಇದರ ತಯಾರಿಗಾಗಿ ಹಂದಿ ಮತ್ತು ಗೋವಿನ ಕೊಬ್ಬನ್ನು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎಂಬ ಆರೋಪವನ್ನು ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ತಳ್ಳಿ ಹಾಕಿದೆ.

ಈ ಸಂಸ್ಥೆಯು ತಮಿಳುನಾಡಿನ ಡಿಂಡಿಗಳ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾವು ಗೋವು ಮತ್ತು ಹಂದಿಯ ಕೊಬ್ಬನ್ನು ತಿರುಪತಿ ಲಾಡು ತಯಾರಿಕೆಗಾಗಿ ನೀಡಿಲ್ಲ ಎಂದು ಅದು ಹೇಳಿದೆ.

ತಿರುಪತಿಯ ಲಾಡು ತಯಾರಿಕೆಗಾಗಿ ತುಪ್ಪ ಸರಬರಾಜು ಮಾಡುವ ಕಂಪನಿಗಳು ಹಲವು ಇದ್ದು ತಾನು ಅದರಲ್ಲಿ ಒಂದು ಕಂಪನಿ ಮಾತ್ರ ಎಂದು ಹೇಳಿಕೊಂಡಿದೆ.

ಇದೇ ವೇಳೆ ತಿರುಪತಿಯ ಲಾಡು ತಯಾರಿಕೆಗಾಗಿ ಕೆಜಿಗೆ 320 ರೂಪಾಯಿಯಂತೆ ತುಪ್ಪಕ್ಕೆ ಟೆಂಡರ್ ಕರೆಯಲಾಗಿತ್ತು. ಇಷ್ಟು ಕಡಿಮೆ ರೇಟಿಗೆ ಒಂದು ಕೆಜಿ ತುಪ್ಪ ಸಿಗಲು ಸಾಧ್ಯವೇ ಇಲ್ಲ. ಶುದ್ಧ ತುಪ್ಪ ಸಿಗಬೇಕಾದರೆ 900 ರೂಪಾಯಿ ನೀಡಬೇಕಾಗಿದೆ. ಆದ್ದರಿಂದ ವೈಎಸ್ಆರ್ ಸರ್ಕಾರವು ಈ ವಿಷಯದಲ್ಲಿ ಮೋಸ ಮಾಡಿದೆ ಎಂದು ಟಿಡಿಪಿ ಹೇಳಿದೆ.