ಉತ್ತರಾಖಂಡ: ಎಸ್ಐಆರ್‌ನಲ್ಲಿ ಅತ್ಯಧಿಕ ಮುಸ್ಲಿಮರ ಹೆಸರು ಡಿಲೀಟ್

0
255

ಸನ್ಮಾರ್ಗ ವಾರ್ತೆ

ಉತ್ತರಾಖಂಡದಲ್ಲಿ ಮುಸ್ಲಿಂ ಬಾಹುಳ್ಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿವೆ ಎಂದು ವರದಿಗಳು ತಿಳಿಸಿವೆ . ವರದಿಯ ಪ್ರಕಾರ ಎಸ್ಐಆರ್ ನಲ್ಲಿ ಅಳಿಸಲಾದ ಮತದಾರರಲ್ಲಿ ಆಲಿ, ಖಾನ್,, ಅಹಮದ್, ಬೇಗಂ, ಹುಸೇನ್, ಮತ್ತು ಜಹಾನ್ ಮುಂತಾದ ಉಪನಾಮಗಳು ಹೆಚ್ಚಿವೆ.

ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಅಂತರಕ್ಕಿಂತ ಡಿಲೀಟ್ ಆದವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಇದೆ ವೇಳೆ ಉತ್ತರಾಖಂಡದ ಎಸ್ಐಆರ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸಲಾದ ಬೃಹತ್ ಆಕ್ಷೇಪಣೆಗಳು ಎಂಬ ಹೆಸರಲ್ಲಿ ನ್ಯೂಸ್ ಲ್ಯಾಂಡ್ರಿ ತನಿಖಾ ವರದಿಯನ್ನು ಬಿಡುಗಡೆಗೊಳಿಸಿದೆ. ಉತ್ತರಖಂಡದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 5 ಮಂದಿ 6500 ಮತದಾರರ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ ಮತ್ತು ಈ 6500 ಮಂದಿ ಕೂಡ ಮುಸ್ಲಿಮರಾಗಿದ್ದಾರೆ ಎಂದು ತಿಳಿದು ಬಂದಿದೆ ಅಂದರೆ ಕೇವಲ ಐದು ಮಂದಿ 6500 ಮುಸ್ಲಿಂ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಆಕ್ಷೇಪಿಸಿದ್ದಾರೆ.

ಕಿಚ್ಚ ಎಂಬ ಕ್ಷೇತ್ರದಲ್ಲಿ 4,855 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಬಿಜೆಪಿ ಬೂತ್ ಮಟ್ಟದ ಒಬ್ಬ ಏಜೆಂಟ್ ಆಕ್ಷೇಪಣೆ ಸಲ್ಲಿಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಒಬ್ಬನೇ ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಕ್ಷೇಪಣೆ ಸಲ್ಲಿಸುವುದೆಂದರೆ ಅದರಲ್ಲಿ ಕೃತ್ರಿಮತೆ ಇದೆ ಎಂದು ಹೇಳಲಾಗಿದೆ. ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಇಂತಹ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದ್ದು ಅದರ ಪ್ರಕಾರ ಆ ಬಳಿಕ ಮತದಾರರ ಪಟ್ಟಿಯಿಂದ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದುಬಂದಿದೆ.