ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ದೇಶದಿಂದ ಪಲಾಯನಗೈದ ಉದ್ಯಮಿ ವಿಜಯ್ ಮಲ್ಯರ ಹೆಸರಿನಲ್ಲಿರುವ ಆಸ್ತಿಗಳನ್ನು ಮಾರಲು ಬ್ಯಾಂಕುಗಳಿಗೆ ಕೋರ್ಟು ಅನುಮತಿ ನೀಡಿದೆ. ಸಾಲ ವಂಚನೆಯಿಂದ ಇಡಿ ಮುಟ್ಟುಗೋಲು ಹಾಕಿರುವ ಆಸ್ತಿಗಳನ್ನು ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಪ್ರಕಾರ ಮಾರಾಟ ಮಾಡಲು ಬ್ಯಾಂಕುಗಳಿಗೆ ಕೋರ್ಟು ಅನುಮತಿ ನೀಡಿತು. ಮಲ್ಯ 5600 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಮ್ಯಾನೇಜಿಂಗ್ ಡೈರಕ್ಟರ್ ಮಲ್ಲಿಕಾರ್ಜುನ್ ರಾವ್ ಹೇಳಿದರು.
ಭಾರತದ 17 ಬ್ಯಾಂಕಿಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ವಿಜಯ ಮಲ್ಯ ವಂಚಿಸಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಬ್ರಿಟನ್ಗೆ ಓಡಿಹೋದ ಮಲ್ಯರನ್ನು ಕರೆತರಲು ಸಿಬಿಐ, ಎಂಪೋರ್ಸ್ಮೆಂಟ್ ಡೈರಕ್ಟರ್ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಭಾರತಕ್ಕೆ ಅವರನ್ನು ಕೊಡಬೇಕೆಂದು ಸಲ್ಲಿಸಲಾದ ಅರ್ಜಿಯನ್ನು ಮೇ 14ರಂದು ಬ್ರಿಟನ್ ಕೋರ್ಟು ತಳ್ಳಿಹಾಕಿತ್ತು. ನಂತರ ಭಾರತಕ್ಕೆ ಬಂದರೆ ಅವರನ್ನು ಯಾವ ಜೈಲಿನಲ್ಲಿಡುತ್ತೀರಿ ಎಂದು ಕೋರ್ಟು ಕೇಳಿತ್ತು. ಮುಂಬೈ ಅರ್ಥರ್ ರೋಡ್ ಜೈಲಿನ ವೀಡಿಯೊ ಕೋರ್ಟಿಗೆ ಸಿಬಿಐ ತೋರಿಸಿತ್ತು. ಜೈಲಿನ ಅತ್ಯಂತ ಸುರಕ್ಷಿತವಾದ ಎರಡು ಮಹಡಿ ಕಟ್ಟದೊಳಗೆ ಅವರನ್ನು ಇರಿಸಲಾಗುವುದು ಎಂದು ಸಿಬಿಐ ಹೇಳಿರುವುದಾಗಿ ವರದಿಯಾಗಿದೆ.












