ವಯನಾಡ್: ಮೂವರು ಪೊಲೀಸರಿಗೆ ಕೊರೋನಾ ದೃಢ

0
395

ಸನ್ಮಾರ್ಗ ವಾರ್ತೆ

ಕಲ್ಪಟ್ಟ,ಮೇ.14: ಕೇರಳದ ವಯನಾಡಿನಲ್ಲಿ ಇನ್ನೊಬ್ಬ ಪೊಲೀಸ್‍ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದ್ದು, ಬುಧವಾರ ಇಬ್ಬರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಇದರೊಂದಿಗೆ ಕೊರೋನಾ ಪಾಸಿಟಿವ್ ಆದ ಪೊಲೀಸರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮಾನಂದವಾಡಿ ಪೊಲೀಸ್ ಠಾಣೆಯ ತಾತ್ಕಾಲಿಕ ಹೊಣೆಯನ್ನು ವೆಳ್ಳಮುಂಡ ಹೌಸ್ ಅಧಿಕಾರಿಗೆ ವಹಿಸಿಕೊಡಲಾಗಿದೆ. ಮಾನಂದವಾಡಿಯ ಸಬ್ ಡಿವಿಷನ್ ಹೊಣೆಗಾರಿಕೆಯನ್ನು ವಯನಾಡ್ ಎಎಸ್ಪಿಗೆ ವಹಿಸಿಕೊಡಲಾಗಿದೆ.

ಮಾನಂದವಾಡಿ ಪೊಲೀಸ್ ಠಾಣೆಯ 24 ಪೊಲೀಸ್ ಅಧಿಕಾರಿಗಳ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷಿಸಲಾಗಿತ್ತು. ಇವರಲ್ಲಿ ಹದಿನೆಂಟು ಮಂದಿಯ ಫಲಿತಾಂಶ ಬಂದಿದೆ. ಮೂವರಿಗೆ ಕೊರೋನಾ ದೃಢಪಟ್ಟಿದ್ದು, ಮಾನಂದವಾಡಿ ಪೊಲೀಸ್ ಠಾಣೆಯ ಎಲ್ಲ ಪೊಲೀಸರು ಡ್ಯೂಟಿ ರೆಸ್ಟ್ ಆಗಿದ್ದವರೂ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರಲು ತಿಳಿಸಲಾಗಿದೆ. ನಿನ್ನೆ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದವರನ್ನು ಸಮೀಪದ ಲಾಡ್ಜ್ ಮತ್ತು ರಿಸಾರ್ಟ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.