ಹಿಂದೂಗಳಿಗೆ ನಾವು ರಕ್ಷಣೆ ನೀಡುತ್ತೇವೆ, ಪ್ರವಾದಿ(ಸ) ಬಲವಂತದ ಮತಾಂತರವನ್ನು ಬಯಸಿಲ್ಲ- ಇಮ್ರಾನ್ ಖಾನ್

0
1032

ಇಸ್ಲಾಮಾಬಾದ್, ಜು. 30: ತನ್ನ ಸರಕಾರ ಹಿಂದೂ ಅಲ್ಪಸಂಖ್ಯಾತರ ಹಕ್ಕುಗಳಿಗೆ ರಕ್ಷಣೆ ನೀಡಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನ ಮಾಧ್ಯಮಗಳ ವರದಿಯ ಪ್ರಕಾರ ಅಲ್ಪಸಂಖ್ಯಾತರ ಕಾರ್ಯಕ್ರಮವೊಂದರಲ್ಲಿ ಅವರು ಸೋಮವಾರ ಮಾತಾಡುತ್ತಿದ್ದರು. ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳಿಗೆ ಪೂರ್ಣ ಪ್ರಮಾಣದ ಸುರಕ್ಷೆ ನೀಡಲಾಗುವುದು. ಅವರ ಧಾರ್ಮಿಕ ಕೇಂದ್ರಗಳಿಗೂ ರಕ್ಷಣೆ ಮತ್ತು ನೆರವು ನೀಡಲಾಗುವುದು. ಹಿಂದೂ ಮಂದಿರ, ಸಿಖ್ ಗುರುದ್ವಾರಗಳ ಜೀರ್ಣೋದ್ಧಾರ ನಡೆಸಲಾಗುವುದು ಮತ್ತು ಸಂರಕ್ಷಣೆ ನೀಡಲಾಗುವುದು ಇಮ್ರಾನ್ ಖಾನ್ ಹೇಳಿದರು.

ಇಮ್ರಾನ್ ಖಾನ್ ಭಯೋತ್ಪಾದಕರನ್ನು ವಿರೋಧಿಸಿದರಲ್ಲದೆ, ಇಸ್ಲಾಮ್ ಅಲ್ಪಸಂಖ್ಯಾತರನ್ನು ಬಲವಂತದಿಂದ ಮತಾಂತರ ಗೊಳಿಸುವ ಅನುಮತಿ ನೀಡಿಲ್ಲ. ಉಗ್ರವಾದಿಗಳು ತಮ್ಮ ಮಾನಸಿಕತೆ ಬದಲಾಯಿಸಿಕೊಳ್ಳಲಿ. ಇಸ್ಲಾಂ ಶಾಂತಿಯ ಧರ್ಮವಾಗಿದೆ. ಬಾಧ್ಯತೆಯ ಧರ್ಮ ಅಲ್ಲ. ಬಲವಂತದಿಂದ ಮತಾಂತರ ಮಾಡಲು ಯತ್ನಿಸುವವರಿಗೆ ಇಸ್ಲಾಮ್ ಧರ್ಮದ ಕುರಿತು ಅರಿವಿಲ್ಲ ಎಂದು ಇಮ್ರಾನ್ ಹೇಳಿದರು.

ಇಸ್ಲಾಮ್ ನ ಹೆಸರಿನಲ್ಲಿ ಅಂಗಡಿ ತೆರೆಯಲಾಗಿದೆ. ಸಿಂಧ್‍ನಲ್ಲಿ ಬಲವಂತದಿಂದ ಮುಸ್ಲಿಮರನ್ನಾಗಿಸುವ ಘಟನೆಯು ನಡೆಯುತ್ತಿದೆ ಎಂದು ಕೇಳಿದ್ದೇನೆ. ಬಲವಂತದಿಂದ ಮತಾಂತರಿಸುವವರಿಗೆ ಇಸ್ಲಾಂ ಧರ್ಮ ಗೊತ್ತಿಲ್ಲ. ನಾವು ಅದು ಹೇಗೆ ಬಲವಂತದಿಂದ ಇತರರನ್ನು ಮತಾಂತರಿಸಲು ಸಾಧ್ಯ ಎಂದು ಇಮ್ರಾನ್ ಪ್ರಶ್ನಿಸಿದರು.