ಚುನಾವಣಾ ಫಲಿತಾಂಶವು ಹಿಂದುತ್ವ ಫ್ಯಾಸಿಸ್ಟ್‌ ವಾದಕ್ಕೆ ಲಭಿಸಿದ ತಕ್ಕ ಉತ್ತರವಾಗಿದೆ: ವೆಲ್ಫೇರ್ ಪಾರ್ಟಿ

0
859

ಸನ್ಮಾರ್ಗ ವಾರ್ತೆ

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶವು ಫ್ಯಾಸಿಸ್ಟ್ ವಾದ ಬಿಜೆಪಿ ಪಕ್ಷದ ಮುಖಕ್ಕೆ ಬಿಗಿಯಾದ ಹೊಡೆತವಾಗಿದೆ ಮತ್ತು ಇದು ಪ್ರಜಾಪ್ರಭುತ್ವ ಮತ್ತು ಸಂಯುಕ್ತತೆಯ ವಿಜಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹೇಳಿದೆ.

ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ “ಮೋದಿ ಇಲ್ಲದೆ ಮತ್ತೆ ಯಾರು” ಎಂಬ ಸೊಕ್ಕಿಗೆ ಉತ್ತರವಾಗಿದೆ ಮತ್ತು ಮೋದಿಯವರು ಅಜೇಯವಲ್ಲ ಎಂಬ ಬಹುತೇಕ ಭಾರತೀಯರ ನಿರ್ಣಯಕ್ಕೆ ಬಲಪಡಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಡಾ ಎಸ್ ಕ್ಯೂ ಆರ್ ಇಲಿಯಾಸ್ ರವರು ಹೇಳಿದರು.

ಕೇಂದ್ರ ಸರ್ಕಾರದ ವ್ಯವಸ್ಥೆಯನ್ನು ಉಪಯೋಗಿಸಿ ಭಾರಿ ಮತದಾನ ಬಂಡವಾಳದೊಂದಿಗೆ ಪ್ರಚಾರವನ್ನು ಹಮ್ಮಿಕೊಂಡಿದ್ದರು ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳಾದ ECI, ED, CBI, NIA, IT ದುರುಪಯೋಗ ಮಾಡಿದ್ದಾರೆ ಎಂದು ಡಾಕ್ಟರ್ ಕ್ಯೂ.ಆರ್ ಇಲಿಯಾಸ್ ರವರು ಆಪಾದಿಸಿದ್ದಾರೆ ಹಾಗೂ ತನಿಖೆಗೆ ಆಗ್ರಹಿಸಿದ್ದಾರೆ.

Covid-19 ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿ ಬ್ರಹತ್ ರಾಲಿ ಮತ್ತು ರೋಡ್ಶೋ ಹಮ್ಮಿಕೊಂಡಿರುವ ಮೋದಿ ಮತ್ತು ಅಮಿತ್ ಶಾ ರವರ ಬೇಜವಾಬ್ದಾರಿ ವರ್ತನೆಯನ್ನು ಡಾಕ್ಟರ್ ಇಲಿಯಾಸ್ ರವರು ಟೀಕಿಸಿದರು ಮತ್ತು ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ತಂದಿಟ್ಟಿರುವ ಕುಂಭ ಮೇಳ ಕ್ಕೆ ನೇರ ಹೊಣೆಗಾರರಾಗಿವುದನ್ನು ಟೀಕಿಸಿದರು.

ಸಂಯುಕ್ತತೆ ಮತ್ತು ಪ್ರಾದೇಶಿಕ ಪಕ್ಷಗಳು ಮೋದಿ ಮತ್ತು ಶಾಹ್ ರವರ ಹಿಂದುತ್ವ ಶಕ್ತಿಗಳಿಗೆ ಉತ್ತರವಾಗಿವೆ ಹಾಗೂ BJP ಚುನಾವಣೆ ಸೋತಿರುವ ರಾಜ್ಯಗಳಲ್ಲಿ ಸ್ಥಳೀಯ ಗುರುತುಗಳು ಮೇಲುಗೈ ಸಾಧಿಸಿದ್ದು ಆಶ್ಚರ್ಯವಲ್ಲ ಎಂದು Dr ಇಲ್ಯಾಸ್ ರವರು ಹೇಳಿದರು.

ಈ ಚುನಾವಣೆಗಳು ಮೋದಿ ಪರ್ಯಾಯ ಆಯ್ಕೆಗಳನ್ನು ತೋರಿಸಿವೆ ಹಾಗೂ ಈ ದೇಶದಲ್ಲಿ ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳ ಮೈತ್ರಿಯು BJP ಪಕ್ಷದ ದರ್ಪದ ವಿರುದ್ಧ ಹೋರಾಡಬಲ್ಲವು ಎಂದು ಡಾಕ್ಟರ್ ಇಲಿಯಾಸ್ ರವರು ಹೇಳಿದರು.

ಡಾ. ಎಸ್ ಕ್ಯೂ ಆರ್ ಇಲಿಯಾಸ್ ರವರು ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್ ಮತ್ತು ಪಿಣರಾಯಿ ವಿಜಯ್ ರವರ ಪಕ್ಷಗಳ ವಿಧಾನಸಭಾ ಚುನಾವಣೆಯ ವಿಜಯಕ್ಕೆ ಅಭಿನಂದಿಸಿದರು ಮತ್ತು “ನೀವು ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ನ್ಯಾಯದ ಆಧಾರದ ಮೇಲೆ ಒಂದು ಒಳ್ಳೆಯ ಸರ್ಕಾರ ಕೊಡುತ್ತೀರಿ ಮತ್ತು ರಾಜ್ಯದ ಜನತೆಗೆ ಶಾಂತಿ,ಸಮೃದ್ಧಿ,ಒಳ್ಳೆಯ ಆರೋಗ್ಯ ಮತ್ತು ಕಲ್ಯಾಣ ತರುತ್ತೀರಿ ಎಂದು ಆಶಿಸುತ್ತೇನೆ” ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರು ಡಾ ಎಸ್ ಕ್ಯೂ ಆರ್ ಇಲಿಯಾಸ್ ರವರು ಹೇಳಿದರು.

BJP ಪಕ್ಷದ ವಿಭಜಿಸಿ ಆಳುವ ಸಿದ್ಧಾಂತದ ಬೇಟೆಯಾಗದೆ ಪಶ್ಚಿಮ ಬಂಗಾಳ, ತಮಿಳ್ ನಾಡು, ಕೇರಳ ರಾಜ್ಯಗಳ ಜನತೆಯು ಧೈರ್ಯ, ವಿವೇಕತೆ, ಚಾಕಚಕ್ಯತೆಯಿಂದ ಮತ ಚಲಾಯಿಸಿದ್ದನ್ನು ಡಾ. ಇಲ್ಯಾಸ್ ರವರು ಅಭಿನಂದಿಸಿದರು ಮತ್ತು ಪ್ರಶಂಸಿಸಿದರು.