ಬಂದರ್ ರಸ್ತೆ ದುರಸ್ತಿಗೊಳಿಸಿದ ವೆಲ್ಫೇರ್ ಪಾರ್ಟಿ: ರಸ್ತೆ ತಡೆ ನಡೆಸುವುದಾಗಿ ಸ್ಥಳೀಯಾಡಳಿತಕ್ಕೆ ಎಚ್ಚರಿಕೆ- ವೀಡಿಯೊ

0
713

ಮಂಗಳೂರು: ಮೊದಲಿನಿಂದಲೇ ಕರ್ನಾಟಕದ ದೊಡ್ಡ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ, ಮಂಗಳೂರು ಬಂದರಿನ ರಸ್ತೆಗಳನ್ನು ತೀವ್ರ ನಿರ್ಲಕ್ಷಿಸುತ್ತಿರುವ ಸ್ಥಳೀಯಾಡಳಿತವು, ಅದರಲ್ಲೂ ಹೆಚ್ಚು ಹದಗೆಟ್ಟು ಹೋಗಿರುವ ಮುಖ್ಯ ದಾರಿಗಳಾದ ನೆಲ್ಲಿಕಾಯಿ ರಸ್ತೆ ಮತ್ತು ಮೊಹಮ್ಮದಲಿ ರಸ್ತೆಯ ದುರ್ಗತಿಯನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂಬ ಆರೋಪವನ್ನು ವೆಲ್ಫೇರ್ ಪಾರ್ಟಿಯು ಮಾಡುತ್ತಲೇ ಬಂದಿದೆ. ಇವತ್ತು ಜು. ೨೯ರಂದು ಶ್ರಮದಾನ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದೆ.

ಕೆಲವು ತಿಂಗಳ ಮೊದಲು ಸ್ಮಾರ್ಟ್ ಸಿಟಿ ಯೋಜನೆಯ ಕಾರಣ ನೀಡಿ, ಸರಕಾರವು ರಸ್ತೆಯ ಮಧ್ಯದಲ್ಲಿಯೇ ಉದ್ದಕ್ಕೆ ಹೋಂಡ ಮಾಡಿ, ಚರಂಡಿ ಕಾಮಗಾರಿಯನ್ನು ಪ್ರಾಂಭಿಸಿ, ಅದನ್ನು ಕೇವಲ ಮಣ್ಣುಗಳಿಂದಲೇ ಮುಚ್ಚಿತ್ತು ಎಂದು ಹೇಳಿರುವ ಪಕ್ಷವು, ಆ ಸಮಯದಲ್ಲಿ ವೆಲ್ಫೇರ್ ಪಾರ್ಟಿಯ ಜಿಲ್ಲಾ ಹೊಣೆಗಾರರು ಸ್ಥಳೀಯ ವ್ಯಾಪಾರಿಗಳನ್ನು ಸೇರಿಸಿ, ಪತ್ರಿಕಾ ಮಾಧ್ಯಮ ಮತ್ತು ಸುದ್ದಿ ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ಬರುವಂತೆ ಮಾಡಿದ್ದರು. ಇದರ ಎರಡು ದಿನಗಳ ಬಳಿಕ ಆಡಳಿತವು ಮಣ್ಣು ಹಾಕಿದ್ದ ಸ್ಥಳಕ್ಕೆ ಡಾಮರಿನಿಂದ ತೇಪೆ ಹಚ್ಚುವ ಕಾರ್ಯ ಮಾಡಿ, ೬ ತಿಂಗಳ ಬಳಿಕ ಕಾಂಕ್ರೀಟ್ ಹಾಕುವ ಭರವಸೆ ನೀಡಿತ್ತು. ಇತ್ತೀಚಿಗೆ ಮಳೆ ನೀರು ಹೋಗಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲದ್ದರಿಂದ, ನೀರು ರಸ್ತೆಯಲ್ಲೆ ಚಲಿಸಿ, ಮಣ್ಣು, ಡಾಮರು ಕಿತ್ತು ಹೋಗಿ ಜನ ಸಂಚಾರ ದುಸ್ತರವಾಗಿದೆ. ಇದೀಗ ಚಲಿಸಲೇ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು, ಆದ್ದರಿಂದ, ಸ್ಥಳೀಯಾಡಳಿತವನ್ನು ಎಚ್ಚರಿಸಲು ಹ್ಯುಮಾನಿಟಿ ರಿಲೀಫ್ ಸೊಸೈಟಿ(ಹರ್ಸ್)ಯ ಸಹಕಾರದೊಂದಿಗೆ ಶ್ರಮದಾನವನ್ನು ನಡೆಸಿರುವುದಾಗಿ ವಿವರಿಸಿದೆ.

ಶ್ರಮದಾನದ ನೇತ್ರತ್ವವನ್ನು ವಹಿಸಿದ್ದ ಪಕ್ಷದ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಯಿಲ್ಮಾ ಮಾತನಾಡಿ, “ವಾಹನ ಸಾಗಲು ಮತ್ತು ಜನರು ನಡೆದಾಡಲು ರಸ್ತೆ ತಕ್ಕಮಟ್ಟಿಗೆ ಸುಧಾರಣೆಯಾಗಿದೆ. ಹಲವರಿಂದ ರಸ್ತೆಗೆ ಸಂಬಂಧಿಸಿ ಮನವಿ ನೀಡಲ್ಪಟ್ಟಿದ್ದು, ಮಳೆಗಾಲ ಮುಗಿದ ಕೂಡಲೇ ಸರಕಾರವು ಸ್ಪಂದಿಸದೇ ಇದ್ದರೆ, ಸ್ಥಳೀಯರನ್ನು ಒಟ್ಟು ಸೇರಿಸಿ ರಸ್ತೆ ತಡೆ, ಸಂಬಂಧ ಪಟ್ಟ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.


ಇಂದು Welfare Party(WPI) ಕಾರ್ಯಕರ್ತರು, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ(HRS)‌ ಸಹಕಾರದಲ್ಲಿ, ಬಂದರಿನ ಮುಖ್ಯ ದಾರಿಗಳಾದ ನೆಲ್ಲಿಕಾಯಿ ಹಾಗೂ ಮುಹಮ್ಮದಾಲಿ ರಸ್ತೆಯಲ್ಲಿ ಸ್ಥಳೀಯಾಡಳಿತದ ವೈಫಲ್ಯದಿಂದ ನಿರ್ಮಾಣವಾದ ಆಳದ ಗುಂಡಿ‌ಗಳಿಗೆ, ಕೆಂಪು ಕಲ್ಲು‌ ಹಾಕಿ, ಸಿಮೆಂಟ್ ಮಿಶ್ರಿತ ಜೆಲ್ಲಿಯಿಂದ ಸಮತಟ್ಟು ಮಾಡುವ ಶ್ರಮದಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರು ನಮ್ಮೊಂದಿಗೆ ಕೈ ಜೋಡಿಸಿದರು…

Posted by Welfare Party of India Mangalore on Monday, July 29, 2019