ಏನಿದು ಇ-ರುಪಿ? ಹಣವಿಲ್ಲದೆ ಹೇಗೆ ಸೇವೆಯನ್ನು ಪಡೆಯಬಹುದು… ಇಲ್ಲಿದೆ ಪೂರ್ಣ ಮಾಹಿತಿ

0
566

ಸನ್ಮಾರ್ಗ ವಾರ್ತೆ

ಮಧ್ಯವರ್ತಿಗಳ ಮಧ್ಯಪ್ರವೇಶದಿಂದಾಗಿ ಸರಕಾರದ ಸಹಾಯ ಜನರಿಗೆ ಸರಿಯಾಗಿ ಸಿಗುವುದಿಲ್ಲ ಎಂಬ ದೂರು ವ್ಯಾಪಕವಾಗಿದ್ದು ಸರಕಾರದ ಸೌಲಭ್ಯಗಳಲ್ಲಿ ಭ್ರಷ್ಟಾಚಾರ, ವಂಚನೆ ಕಡಿಮೆ ಮಾಡುವ ಉದ್ದೇಶದಲ್ಲಿ ಡೈರಕ್ಟ್ ಬೆನಿಫಿಟ್ ಟಾನ್ಸ್‌ಫರ್(ಡಿಬಿಟಿ) ಆರಂಭಿಸಲಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಐಟಿ ಉಪಕರಣಗಳನ್ನು ಉಪಯೋಗಿಸಿ ವೇಗದಲ್ಲಿ ಫಂಡ್ ಕೊಡಲು ಸರಿಯಾದ ಫಲಾನುಭವಿಗೆ ಸಿಗುವಂತೆ ಮಾಡಲು ಇ-ರುಪಿಯಂದ ಯೋಜನೆ ಹಮ್ಮಿಕೊಳ್ಳಲಾಗಿದೆ.

ಫಂಡ್ ಸೋರಿಕೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರಕಾರ ಅತ್ಯಂತ ಹೊಸ ಇ-ರುಪಿ ಮಂಡಿಸುತ್ತಿದ್ದಾರೆ.

ಇ-ರುಪಿ ಅಂದ್ರೇನು?

ದೇಶದಲ್ಲಿ ಡಿಜಿಟಲ್ ಹಣವಹಿವಾಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇ-ರುಪಿ ತರಲಾಗುತ್ತಿದ್ದು ಇಲೆಕ್ಟ್ರಾನಿಕ್ ವಾಚರ್ ಆಧಾರದಲ್ಲಿ ಡಿಜಿಟಲ್ ಪೇಮೆಂಟ್ ಸಿಸ್ಟಂ ನ್ಯಾಶನಲ್ ಪೇಮೆಂಟ್ಸ್ ಕೊರ್ಪೊರೇಷನ್(ಎನ್‍ಪಿಸಿಐ) ಅಭಿವೃದ್ಧಿಪಡಿಸಿದೆ.

ರಾಷ್ಟ್ರಿಯ ಆರ್ಥಿಕ ಸೇವಾ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಾಯದಲ್ಲಿ ಯುಪಿಐ ಫ್ಲಾಟ್‍ಪಾರ್ಮ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಡಿಜಿಟಲ್ ಪೇಮೆಂಟ್ ಹಣ-ಸಂಪರ್ಕ ರಹಿತ ರೂಪಾಯಿ ಇ-ರುಪಿ ಆಗಿದೆ.

ಇ-ರುಪಿ ಸೇವೆ ಹೇಗೆ ಬಳಸಬೇಕು?

ಇ-ರುಪಿ ವ್ಯವಸ್ಥೆಯನ್ನು ಮೊಬೈಲ್ ಫೋನ್‍ಗಳನ್ನು ಬಳಸಿ ಉಪಯೋಗಿಸಬಹುದಾಗಿದೆ. ಇದು ಅಡಚಣೆಯಿಲ್ಲದೆ ಒಂದೇ ಬಾರಿ ಪೇಮೆಂಟ್ ವ್ಯವಸ್ಥೆಯಾಗಿದೆ. ಒಬ್ಬ ಫಲಾನುಭವಿಗೆ ಅವರ ಮೊಬೈಲ್ ಫೋನ್‍ನಲಿ ಒಂದು ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಆಧಾರಿತ ಇ-ವೋಚರ್ ಸಿಗುತ್ತದೆ. ಅದು ವಿವಿಧ ಸೇವಾಧಾತರಿಂದ ಪುನಃ ತೆಗೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಆಸ್ಪತ್ರೆಯಲ್ಲಿ ಅಥವಾ ಆರೋಗ್ಯ ಕೇಂದ್ರದಲ್ಲಿ ವೋಚರ್‌ಗಳನ್ನು ಉಪಯೋಗಿಸಬಹುದು. ಇ-ರುಪಿ ಪೆಮೆಂಟ್ ಸೇವೆಯ ಸಹಾಯದಲ್ಲಿ ಕಾರ್ಡು, ಡಿಜಿಟಲ್ ಪೇಮೆಂಟ್ ಆಪ್, ಇಂಟರ್‍ನೆಟ್ ಬ್ಯಾಂಕಿಂಗ್ ಇಲ್ಲದೆ ಬಳಕೆದಾರ ವೋಚರ್ ಉಪಯೋಗಿಸಬಹುದು. ಕ್ಯಾಶ್‍ಲೆಸ್ ಆಗಿ ಕೊರೋನ ವ್ಯಾಕ್ಸಿನ್ ಸೌಕರ್ಯ ಇ-ರುಪಿ ಒದಗಿಸುತ್ತದೆ.

ಇ-ರುಪಿ ಸೇವೆಗಳ ಸ್ಪೋನ್ಸರ್‌ರೊಂದಿಗೆ ಬಳಕೆದಾರರ ಸೇವಾದಾತರನ್ನು ಡಿಜಿಟಲ್ ರೂಪದಲ್ಲಿ ಜೋಡಿಸಬಹುದು. ವ್ಯವಹಾರ ಆದ ಮೇಲೆ ಮಾತ್ರ ಸೇವಾ ದಾತನಿಗೆ ಹಣ ಸಿಕ್ಕಿದೆ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರೀಪೈಡ್ ಸೇವೆಯ ಆಧಾರದಲ್ಲಿ ಇದಿದೆ. ಆದುದರಿಂದ ಸೇವಾ ದಾತನಿಗೆ ಸರಿಯಾದ ಸಮಯದಲ್ಲಿ ಹಣ ಸಿಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ. ಎಚ್‌ಡಿಎಫ್‍ಸಿಬ್ಯಾಂಕ್ ,ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಇ-ರುಪಿ ಸೇವೆಯೊಂದಿಗೆ ಸಹಕರಿಸಲಿದೆ.

ಇ-ರುಪಿ ಫಲಾನುಭವಿಗಳು ಯಾರು?

ಮಹಿಳೆಯರು, ಮಕ್ಕಳಿಗೆ ಮದ್ದು, ಪೋಷಕಾಹಾರ ಬೆಂಬಲ ನೀಡುವ ಯೋಜನೆಗಳಿಗೆ ಇರುಪಿ ಸೇವೆ ಖಚಿತಪಡಿಸಿಕೊಳ್ಳಬಹುದಾಗಿದೆ. ಮಾತೃ-ಶಿಶು ಕಲ್ಯಾಣ ಯೋಜನೆಗಲು, ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮಗಳು, ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆ , ಗೊಬ್ಬರ ಸಬ್ಸಿಡಿಗಳಿಗೆ ಸೇವೆಯನ್ನು ಬಳಸಬಹುದಾಗಿದೆ.

ಖಾಸಗಿ ಕ್ಷೇತ್ರದಲ್ಲಿ ಈ ಡಿಜಿಟಲ್ ವಾಚರ್ ಅವರ ಸಿಬ್ಬಂದಿಗಳ ಕಲ್ಯಾಣ ಯೋಜನೆಗಳಿಗೆ ಸಿಎಸ್‍ಆರ್ ಫಂಡ್‍ಗಳಿಗೆ ಉಪಯೋಗಿಸಬಹುದಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿತು.

ಮೊಬೈಲ್ ನಂಬರ್ ಸಾಕು. ಬ್ಯಾಂಕ್ ಖಾತೆ ಬೇಡ
ಡಿಬಿಟಿ ಯೋಜನೆಯಲ್ಲಿ ಜನ್‌ಧನ್ ಖಾತೆ, ಆಧಾರ್ ನಂಬ್ರ, ಮೊಬೈಲ್ ನಂಬ್ರ ಅಗತ್ಯವಿದೆ. ಆಧಾರ್ ನಂಬ್ರ ಕಡ್ಡಾಯವಲ್ಲ. ಆದರೆ ಇ-ರುಪಿಗೆ ಬ್ಯಾಂಕ್ ಖಾತೆ ವಿವರಗಳು ಬೇಕಿಲ್ಲ. ಫಲಾನುಭವಿಯ ಮೊಬೈಲ್ ನಂಬ್ರ ಮಾತ್ರ ಸಾಕು. ಫಲಾನುಭವಿಗಳಿಗೆ ಸಹಾಯ ತಲುಪಿಸಲಿಕ್ಕಾಗಿ ಡಿಬಿಟಿ ಯೋಜನೆ ನೂರು ಕೋಟಿ ಮೊಬೈಲ್ ಕನೆಕ್ಷನ್‍ಗಳನ್ನು ಆಶ್ರಯಿಸಲಿದೆ ಎಂದು 2019ರಲ್ಲಿ ವರದಿ ಬಹಿರಂಗವಾಗಿತ್ತು.