ಹೊಸದಿಲ್ಲಿ, ಜು. 12: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವುವುದನ್ನು ತಡೆಯಬೇಕೆಂದು ಮತ್ತು ಅಲ್ಲಿ ಸೇರಿರುವ ಜನರನ್ನು ಚದುರಿಸಬೇಕೆಂದು ಅಂದು ಸಚಿವರಾಗಿದ್ದ ರಾಜೇಶ್ ಪೈಲಟ್ ಬಯಸಿದ್ದರು. ಆದರೆ ಈ ಕುರಿತು ತೀರ್ಮಾನ ಮಾಡುವುದಕ್ಕಾಗಿ ಪ್ರಧಾನಿ ಪಿವಿ ನರಸಿಂಹರಾವ್ರ ವಸತಿಗೆ ತಲುಪಿದಾಗ ನರಸಿಂಹರಾವ್ ನಿದ್ರಿಸುತ್ತಿದ್ದರು. ಆದ್ದರಿಂದ ಇದನ್ನು ಚರ್ಚಿಸಲು ಸಾಧ್ಯವಾಗಲಿಲ್ಲ…
ಅಂದು ನರಸಿಂಹರಾವ್ ಸಚಿವ ಸಂಪುಟದಲ್ಲಿ ಸಹಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ರ ಹೊಸ ಪುಸ್ತಕದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ವಿಝನ್ ಮುಸ್ಲಿಂ, ಇನ್ವಿಸಬಲ್ ಸಿಟಿಝನ್: ಅಂಡರ್ಸ್ಟಾಡಿಂಗ್ ಇಸ್ಲಾಂ ಇನ್ ಇಂಡಿಯನ್ ಡೆಮಕ್ರಸಿ ಎಂಬ ಪುಸ್ತಕ ಶುಕ್ರವಾರ ಬಿಡುಗಡೆಯಾಗಲಿದೆ. ಬಾಬರಿ ಮಸೀದಿ ಧ್ವಂಸ ಕಾನೂನಿನ ಮುಂದೆ ದೊಡ್ಡ ಪ್ರಶ್ನೆಯನ್ನು ಇರಿಸಿದೆ ಎಂದು ಅವರು ಹೇಳಿದ್ದಾರೆ. ಬಾಬರಿ ಮಸೀದಿ ಕೆಡವಿದ ಬಳಿಕ ದೇಶದಲ್ಲಿ ಹಲವು ಕಡೆ ಕೋಮು ಗಲಭೆ ನಡೆಯಿತು. ಇಸ್ಲಾಂ ಮತ್ತು ವಿಶೇಷತಃ ಭಾರತೀಯ ಮುಸ್ಲಿಮರ ಕುರಿತು ಗ್ರಂಥದಲ್ಲಿ ಸಲ್ಮಾನ್ ವಿವರಿಸಿದ್ದಾರೆ.












