ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯ ಯುರೋಪಿನ ಆರೋಗ್ಯ ನಿರ್ದೇಶಕ ಹ್ಯಾನ್ಸ್ ಕ್ಲೂಝ್ ಒಮಿಕ್ರಾನ್ ಕೊರೋನಕ್ಕೆ ಅಂತ್ಯ ಹಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವರ್ಷ ಮಾರ್ಚ್ ನ ವೇಳೆ ಯುರೋಪಿನ ಶೇ. 60ರಷ್ಟು ಜನರು ಒಮಿಕ್ರಾನ್ ಪೀಡಿತರಾಗಲಿದ್ದಾರೆ ಎಂದು ತಿಳಿಸಿದರು.
ಒಂದೇ ಸಲ ಯುರೋಪಿನಲ್ಲಿ ಒಮಿಕ್ರಾನ್ ಹೆಚ್ಚಾಗಿ ಮತ್ತೆ ಕಡಿಮೆಯಾಗಲಿದೆ. ಆಗ ಕೆಲವು ವಾರಗಳು ಮತ್ತು ತಿಂಗಳಳೊಳಗೆ ವೈಶ್ವಿಕ ರೋಗ ಪ್ರತಿರೋಧಕ ಶಕ್ತಿ ಹೆಚ್ಚಳವಾಗಲಿದೆ. ಈ ವರ್ಷ ಕೊನೆಯಲ್ಲಿ ಕೊರೊನ ಮರಳುವ ಮೊದಲು ಒಂದು ಶಾಂತ ಅವಧಿ ಇರಲಿದೆ. ಆದರೆ ಕೊರೊನ ವಾಪಸು ಬರುತ್ತದೆ ಎಂದು ಕೂಡ ಹೇಳಬೇಕಾಗಿಲ್ಲ ಎಂದು ಕ್ರೂಝ್ ಹೇಳಿದರು. ಅಮೆರಿಕದ ವಿಜ್ಞಾನಿ ಹ್ಯಾನ್ಸ್ ಕ್ಲೂಝ್ರ ಇದೇ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ.
ಇತ್ತೀಚಿನ ಅಂಕಿ ಸಂಖ್ಯೆ ಪ್ರಕಾರ ಅಮೆರಿಕದಲ್ಲಿ ಕೊರೊನ 71,925,931 ರೋಗಿಗಳಿದ್ದಾರೆ. ಅಲ್ಲಿ 889,197 ಮಂದಿಯ ಮೃತ್ಯು ಸಂಭವಿಸಿದೆ. ಈವರೆಗೆ 44,365,669 ಮಂದಿ ಗುಣಮುಖರಾಗಿದ್ದಾರೆ. ಈಗಲೂ ಇಲ್ಲಿ 26,671,065 ಸಕ್ರಿಯ ಪ್ರಕರಣಗಳು ಉಪಸ್ಥಿತವಿದೆ. 25,713 ಜನರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಒಟ್ಟು 15,859,228 ಪ್ರಕರಣಗಳು ಉಪಸ್ಥಿತವಿದೆ. ಇಲ್ಲಿ ಈವರೆಗೆ 153,862 ಜನರು ಕೊರೊನ ಕಾರಣದಿಂದ ಮೃತ್ಯುವನ್ನಪ್ಪಿದರು. ಇದರಿಂದ 12,222,372 ಮಂದಿ ಗುಣಮುಖರಾಗಿದ್ದಾರೆ. ಈಗ ಇಂಗ್ಲೆಂಡಿನಲ್ಲಿ 3,483,054 ಕೊರೊನ ರೋಗಿಗಳಿದ್ದಾರೆ.












