ಮಹಿಳಾ ತಹಶೀಲ್ದಾರನ್ನು ಕಚೇರಿಯಲ್ಲಿ ಪೆಟ್ರೋಲ್ ಸುರಿದು ಕೊಂದ ಭೂಮಾಲಕ

0
838

ಸನ್ಮಾರ್ಗ ವಾರ್ತೆ

ಹೈದರಾಬಾದ್, ನ.೫: ತೆಲಂಗಾಣದ ಅಬ್ದುಲ್ಲಪುರ್‌ಮೆಟ್‌ನಲ್ಲಿ ಮಹಿಳಾ ತಹಶೀಲ್ದಾರ್‌ರನ್ನು ಕಚೇರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೂಮಾಲಕ ಕೊಂದು ಹಾಕಿದ್ದಾನೆ. ತನ್ನ ಜಮೀನಿನ ದಾಖಲೆಯೊಂದಿಗೆ ರೆವೆನ್ಯೂ ಕಚೇರಿಗೆ ಬಂದ ಸುರೇಶ್ ಮುಡಿರಾಜು ತಹಶೀಲ್ದಾರ್ ವಿಜಯಾ ರೆಡ್ಡಿ(36)ರನ್ನು ಅವರ ಕ್ಯಾಬಿನ್‌ಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಜಮೀನಿಗೆ ಸಂಬಂಧಿಸಿದ ದೂರು ದಾರುಣ ಘಟನೆಗೆ ಪ್ರಚೋದನೆಯಾಗಿತ್ತು ಎನ್ನಲಾಗುತ್ತಿದ್ದರೂ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ಸೋಮವಾರ ಮಧ್ಯಾಹ್ನ 1:30ಕ್ಕೆ ಘಟನೆ ನಡೆದಿದೆ. ವಿಜಯ ರೆಡ್ಡಿಯವರ ದೇಹ ಇಡೀ ಸುಟ್ಟು ಹೋಗಿತ್ತು. ಓಡಿ ಬಂದ ಇತರ ಸಿಬ್ಬಂದಿಗಳು ಜೀವ ಉಳಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕ್ರೂರ ಕೃತ್ಯವೆಸಗಿದ ಸುರೇಶ್‌ಗೆ ತಹಶೀಲ್ದಾರರನ್ನು ರಕ್ಷಿಸಲು ಯತ್ನಿಸಿದ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೂ ಸುಟ್ಟ ಗಾಯಗಳಾಗಿವೆ. ಸುರೇಶ್‌ಗೆ ಶೇ.60 ಸುಟ್ಟ ಗಾಯಗಳಾಗಿವೆ. ಈತ ಪೊಲೀಸರ ವಶದಲ್ಲಿದ್ದಾನೆ ಎಂದು ಪೊಲೀಸ್ ಕಮಿಶನರ್ ಮಹೇಶ್ ಎಂ.ಭಾಗವತ್ ತಿಳಿಸಿದರು.