ಕಾವೇರಿದ ಉ.ಪ್ರದೇಶ ಚುನಾವಣಾ ಪ್ರಚಾರ: ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್

0
241

ಸನ್ಮಾರ್ಗ ವಾರ್ತೆ

ಲಕ್ನೊ: ಚುನಾವಣೆ ನಿಕಟವಾಗಿದ್ದು ತನ್ನ ನಿಕಟ ಪ್ರತಿಸ್ಪರ್ಧಿ ಅಖಿಲೇಶ್ ಯಾದವ್‍ರ ಸಮಾಜವಾದಿ ಪಾರ್ಟಿಯನ್ನು ಜಿನ್ನಾರ ಬೆಂಬಲಿಗರು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರಿಸಿದ್ದು, ಅವರು ಪಾಕಿಸ್ತಾನ ಪ್ರೇಮಿಗಳು ಎಂದು ಆದಿತ್ಯನಾಥ್ ಟ್ವೀಟ್‍ನಲ್ಲಿ ಹೇಳಿದ್ದಾರೆ. ‘ಅವರು ಜಿನ್ನಾರ ಬೆಂಬಲಿಗರು, ನಾವು ಸರ್ದಾರ್ ಪಟೇಲ್ ಅಭಿಮಾನಿಗಳು, ಪಾಕಿಸ್ತಾನ ಅವರ ಪ್ರೀತಿಯ ದೇಶ, ನಾವು ದೇಶಕ್ಕಾಗಿ ಬಲಿಯರ್ಪಿಸಲ್ಪಟ್ಟಿರುವವರು” ಎಂದು ಯೋಗಿ ಟ್ವೀಟ್‍ನಲ್ಲಿ ಆರೋಪಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಎರಡನೇ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತದಾರರ ನಡುವೆ ಒಡಕು ಹುಟ್ಟಿಸುವ ಹೇಳಿಕೆಗಳನ್ನು ಯೋಗಿ ನೀಡುತ್ತಿದ್ದಾರೆ. ಹೇಗಾದರೂ ಮಾಡಿ ಗೆಲ್ಲುವುದಕ್ಕಾಗಿ ಬಿಜೆಪಿ ಅವಿರ ಶ್ರಮಿಸುತ್ತಿದೆ. ವಾರಗಳ ಹಿಂದೆ 80/20 ವಿವಾದಾಸ್ಪದ ಹೇಳಿಕೆಯನ್ನು ಯೋಗಿ ನೀಡಿದ್ದರು. ಹಿಂದೂ ಮತದಾರರು ಮತ್ತು ಮುಸ್ಲಿಮ್ ಮತದಾರರ ಅನುಪಾತವನ್ನು ಸೂಚಿಸಿ ಈ ಹೇಳಿಕೆ ಇತ್ತು. ಶೇ. 80ರಷ್ಟು ಮತದಾರರು ಬಿಜೆಪಿ ಜೊತೆಗಿದ್ದಾರೆ ಎಂದು ಯೋಗಿ ಹೇಳಿದ್ದರು.

ಇದಲ್ಲದೇ ವಾರದಲ್ಲೇ ಇನ್ನೊಂದು ವಿವಾದ ಹೇಳಿಕೆಯನ್ನು ನೀಡಿದ್ದ ಅವರು, ಹಿಂದೆ ಗಾಝಿಯಬಾದಿನಲ್ಲಿ ಹಜ್ ಹೌಸ್ ನಿರ್ಮಿಸಲ್ಪಟ್ಟಿತ್ತು. ಆದರೆ ನಮ್ಮ ಸರಕಾರ ಕೈಲಾಸ್ ಮಾನಸ ಸರೋವರ ಭವನ್ ನಿರ್ಮಿಸಿತು ಎಂದು ಹೇಳಿಕೆ ನೀಡಿದ್ದರು. ಫೆಬ್ರುವರಿ 10 ರಂದು ಗಾಝಿಯಾಬಾದಿನಲ್ಲಿ ಚುನಾವಣೆ ನಡೆಯಲಿದೆ.