ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ಸ್ಥಳಗಳ ಹೆಸರು ಬದಲಾಯಿಸಿದಂತೆ ಜನರು ಸರಕಾರವನ್ನು ಬದಲಾಯಿಸುತ್ತಾರೆ: ಅಖಿಲೇಶ್ ಯಾದವ್

0
231

ಸನ್ಮಾರ್ಗ ವಾರ್ತೆ

ಲಕ್ನೊ: ವಿಧಾನಸಭಟ ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶದಲ್ಲಿ ರಾಜಕೀಯ ವಾಗ್‌ಯುದ್ಧ ಪ್ರಾರಂಭವಾಗಿದೆ. ಬಿಜೆಪಿ ಸರಕಾರ ಸ್ಥಳಗಳ ಹೆಸರನ್ನು ಬದಲಾಯಿಸಿದಂತೆ ಜನರು ಸರಕಾರವನ್ನು ಬದಲಾಯಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್‍ರ ನೇತೃತ್ವದ ಬಿಜೆಪಿ ಸರಕಾರವನ್ನು ಟೀಕಿಸಿದ್ದಾರೆ.

ಯೋಗಿ ಸರಕಾರ ಸ್ಥಳಗಳ ಹೆಸರನ್ನು ಮಾತ್ರ ಬದಲಿಸಿದೆ. ಮುಂದೆ ಜನರು ಸರಕಾರವನ್ನೆ ಬದಲಾಯಿಸಲಿದ್ದಾರೆ. ಯುವಕರು, ರೈತರು, ಉದ್ದಿಮೆದಾರರು ಎಲ್ಲರೂ ಯೋಗಿ ಸರಕಾರವನ್ನು ಕೆಳಗಿಳಿಸಲು ತೀರ್ಮಾನಿಸಿದ್ದಾರೆ. ಸಮಾಜವಾದಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಅಖಿಲೇಶ್ ಹೇಳಿದರು.

ಕಾಂಗ್ರೆಸ್ಸನ್ನೂ ಟೀಕಿಸಿದ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಸೊನ್ನೆ ಸೀಟುಗಳು. ನಿನ್ನೆ ಕಾಂಗ್ರೆಸ್ ನಾಯಕಿ ಅಖೀಲೇಶ್ ಯಾದವ್‍ರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದರು. ಚುನಾವಣೆ ಹತ್ತಿರವಾದಾಗ ಮಾತ್ರ ಅಖಿಲೇಶ್‍ರನ್ನು ಉತ್ತರ ಪ್ರದೇಶದಲ್ಲಿ ನೋಡಲು ಸಾಧ್ಯ. ಮುಂದಿನ ವರ್ಷ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ದೇಶದಲ್ಲೇ ಅತೀಹೆಚ್ಚು ಮಹಿಳೆಯರ ವಿರುದ್ಧ ಅಪರಾಧ ನಡೆಯುವ ಹಾಗೂ ನಕಲಿ ಎನ್‍ಕೌಂಟರ್ ನಡೆದ ಸ್ಥಳ ಕೂಡ ಉತ್ತರಪ್ರದೇಶ ಎಂದು ಯೋಗಿ ಸರಕಾರದ ವಿರುದ್ಧ ಹರಿಹಾಯ್ದರು.