ಯುಎಇಯಲ್ಲಿ ಇನ್ನು ನಿಮ್ಮ ದೇಶದ ಯುಪಿಐ ವ್ಯವಸ್ಥೆಯನ್ನು ಬಳಸಿಕೊಂಡು ಶಾಪಿಂಗ್ ಮಾಡಬಹುದು

0
155

ಸನ್ಮಾರ್ಗ ವಾರ್ತೆ

ಯುಎಇ ಗೆ ಬರುವ ಭಾರತೀಯ ಪ್ರವಾಸಿಗರು ಇನ್ನು ಮುಂದೆ ದೇಶದ ಯುಪಿಐ ಸೌಲಭ್ಯವನ್ನು ಬಳಸಿ ಶಾಪಿಂಗ್ ಮಾಡಬಹುದಾಗಿದೆ. ಮಾಲ್ ಗಳು ಸಹಿತ 60,000 ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ರೆಸ್ಟೋರೆಂಟ್ ಗಳು ಶಾಪಿಂಗ್ ಕೇಂದ್ರಗಳು ಮುಂತಾದ ಕಡೆ ಇನ್ನು ಯುಪಿಐ ಪೇಮೆಂಟ್ ಇರುವ ಕ್ಯೂಆರ್ ಕೋಡ್ ಲಭ್ಯವಿರಲಿದೆ. ಇದನ್ನು ಸ್ಕ್ಯಾನ್ ಮಾಡಿ ಭಾರತದ ರೀತಿಯಲ್ಲಿಯೇ ಇಲ್ಲಿ ಶಾಪಿಂಗ್ ಮಾಡಬಹುದಾಗಿದೆ. ದುಬೈ ಮಾಲ್ ಎಮಿರೇಟ್ಸ್ ಮಾಲ್ ಮುಂತಾದ ಪ್ರಮುಖ ಮಾಲ್ ಗಳಲೂ ಸೇರಿ 60,000 ಕೇಂದ್ರಗಳಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಪೇಮೆಂಟ್ ಟರ್ಮಿನಲ್ ಗಳನ್ನು ಸ್ಥಾಪಿಸಲಾಗಿದೆ.