ಹೃದಯಾಘಾತಕ್ಕೆ ತುತ್ತಾಗುತ್ತಿರುವ ಯುವ ಸಮೂಹ ಮತ್ತು ಪರಿಹಾರಗಳು

0
68

ಸನ್ಮಾರ್ಗ ವಾರ್ತೆ

✍️ ಶಿಕ್ರಾನ್ ಶರ್ಫುದ್ದೀನ್ ಎಂ.

ಮೊನ್ನೆ ಸದಫ್ ಫಾತಿಮಾ ಎಂಬ HDFC ಬ್ಯಾಂಕಿನ ಉದ್ಯೋಗಿಯೊಬ್ಬಳು ಇದ್ದಕ್ಕಿಂತ ಹಾಗೆ ಕುರ್ಚಿಯಿಂದ ಕೆಳಗೆ ಬಿದ್ದು ಅಸ್ವಸ್ಥಳಾದಳು; ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲೇ ಅವಳು ತೀರಿ ಹೋದಳು ಎಂದು News 18 ವರದಿ ಮಾಡಿದೆ. ಸಾವಿಗೆ ಉದ್ಯೋಗದಲ್ಲಿರುವ ಕೆಲಸದ ಒತ್ತಡವೇ ನೇರ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 21ರಂದು ಸಾಫ್ಟ್‌ವೇರ್‌ ಇಂಜಿನಿಯರ್ ಒಬ್ಬರು ಚೆನ್ನೈಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರು ತಮಗೆ ತಾವೇ ಕರೆಂಟನ್ನು ಕೊಟ್ಟು ಆತ್ಮಹತ್ಯೆಗೆ ಶರಣಾದರು. ಅವರು ಕೆಲವು ತಿಂಗಳಿನ ಹಿಂದೆ ಹೊಸ ಉದ್ಯೋಗವನ್ನು ಪಡೆದಿದ್ದರು ಎನ್ನಲಾಗಿದೆ; ಅವರು ಉದ್ಯೋಗದಲ್ಲಿ ಭಾರಿ ಒತ್ತಡವನ್ನು ಎದುರಿಸುತ್ತಿದ್ದರು ಎಂದು ಆಗಾಗ ಹೆಂಡತಿಗೆ ಹೇಳುತ್ತಿದ್ದರು.

ಈ ದುರ್ಘಟನೆಯ ಕೆಲವು ದಿನಗಳ ಹಿಂದೆಯೇ ಪುಣೆಯಲ್ಲಿ E&Y ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ CA ಒಬ್ಬರು ಹೃದಯಾಘಾತಕ್ಕೆ ತುತ್ತಾಗಿ ಸಾವನಪ್ಪಿಕೊಂಡರು.

ಈ ಮೂರು ದುರ್ಘಟನೆಯಲ್ಲಿ ಒಂದು ಅಂಶವಿದೆ. ಸಮಾನ ಅದು, ಕೆಲಸದ ಒತ್ತಡವಾಗಿದೆ!!

NCRB ವರದಿಯ ಪ್ರಕಾರ ಕೇವಲ 2022ನೇ ವರ್ಷದಲ್ಲಿ ಸರಿಸುಮಾರು 1.7 ಲಕ್ಷ ಮಂದಿಯರು ಒತ್ತಡ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾದರು. ವೈಜ್ಞಾನಿಕ ನಿಯತಕಾಲಿಕ ‘The Lancet”ನ ವರದಿಯ ಪ್ರಕಾರ ಅದೇ ವರ್ಷ ಜಗತ್ತಿನಾದ್ಯಂತ ಏಳು ಲಕ್ಷ ಉದ್ಯೋಗಿಗಳು ಆತ್ಮಹತ್ಯೆಗೆ ಶರಣಾದರು; ಆತ್ಮಹತ್ಯೆಗೆ ಶರಣಾಗುವಲ್ಲಿ ಭಾರತ ಅಗ್ರ ಸ್ಥಾನದಲ್ಲಿತ್ತು.

ಚಿಂತೆ ಚಿತೆಗೆ ದಾರಿ ಎಂಬಂತೆ ಪಾರಸ್ ಹೆಲ್ತ್ ನ ವೈದ್ಯರ ಪ್ರಕಾರ ಯುವ ಜನರಲ್ಲಿ ವಿಶೇಷವಾಗಿ 20ರಿಂದ 30 ವರ್ಷದವರಲ್ಲಿ ಹೃದಯಾಘಾತವು ಕೇವಲ ಚಿಂತೆಯಿಂದ ಆಗುತ್ತಿದೆ. ಯುವ ಜನರು ಭವಿಷ್ಯದ ಕುರಿತು ಅತೀಯಾಗಿ ಚಿಂತಿಸುತ್ತ ತಮ್ಮ ಅಮೂಲ್ಯ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರಂತೆ.

“ಹಿಂದೆ ಹಿರಿಯರು ತಮ್ಮ ಹಿರಿಯ ವಯಸ್ಸಿನ ಕಾರಣ ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಈಗ ಯುವ ಸಮೂಹವು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ; ನಾವು ಪ್ರತಿ ತಿಂಗಳು ಯುವ ಜನರು ಹೃದಯಾಘಾತಕ್ಕೆ ತುತ್ತಾಗುವ 40-45 ಪ್ರಕರಣಗಳು ದಾಖಲಿಸುತ್ತಿದ್ದೇವೆ” ಎಂದು ಪರಸ್ ಹೆಲ್ತ್ ನ ಹೃದಯ ವಿಭಾಗದ ಡೈರೆಕ್ಟರ್ ಮತ್ತು ಮುಖ್ಯಸ್ಥರಾದ ಡಾ. ಅಮಿತ್ ಭೂಷಣ್ ಶರ್ಮ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ಹೃದಯ ತಜ್ಞರಾದ ಡಾ. ದಿಬ್ಯ ರಂಜನ್ ಬೆಹೆರ ಅವರು, “ಜಗತ್ತಿನಲ್ಲಿ ಜನರ ಜೀವವನ್ನು ತೆಗೆಯುವ ನಂಬರ್ 1 ಹೃದ್ರೋಗ CardioVascular Disease ಆಗಿದೆ” ಎಂದು ಅಭಿಪ್ರಾಯ ಪಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಭಾರತದಲ್ಲಿ ಹೃದಯ ಸಂಬಂಧಿಸಿದ ಸಾವುಗಳು ಶಿಖರಕ್ಕೆ ಏರಿವೆ. ಇದಕ್ಕೆ ಮೂಲ ಕಾರಣ ಒತ್ತಡ, ಅನಾರೋಗ್ಯಕರ ಜೀವನ ಶೈಲಿ, ಆಹಾರ, ಮತ್ತು ವೈಯಕ್ತಿಕ-ವೃತ್ತಿಪರ ಬದುಕಿನ ಅಸಮತೋಲನ ಇತ್ಯಾದಿ ಮೂಲ ಕಾರಣವಾಗಿವೆ.

Deloitte ಕಂಪೆನಿಯವರು ನಡೆಸಿದ Workplace Burnout Surveyಯ ಪ್ರಕಾರ 70% ವೃತ್ತಿಪರರು ತಾವು ಉದ್ಯೋಗ ಸಂಬಂಧಿಸಿದ ಒತ್ತಡಕ್ಕೆ ಮಣಿದಿದ್ದೇವೆ ಎನ್ನುತ್ತಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಲ್ಲಿ ಎದುರಾಗುವ ಗಂಟೆಗಟ್ಟಲೆಗಳ ಕೆಲಸಗಳು, ಕಟ್ಟುನಿಟ್ಟಿನ ಗಡುವುಗಳು, ಮತ್ತು ನಿರೀಕ್ಷೆಗಳು ಅವರಿಗೆ Chronic Sressಗೆ ತಳ್ಳುತ್ತಿದೆ.

ಸಾಮಾನ್ಯವಾಗಿ, ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿ ಕೊಬ್ಬಿನ ಅಂಶಗಳಿಂದ ಅವರಿಗೆ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಅದರೊಂದಿಗೆ, ಉದ್ಯೋಗಿಗಳಲ್ಲಿ ನಿದ್ರಾಹೀನತೆ, ಅಸ್ವಸ್ಥ ಜೀವನಶೈಲಿ, ಧೂಮಪಾನ ಮತ್ತು ಕೆಲಸದ ಒತ್ತಡಗಳಿಂದ ಅವರು ಮೈಗ್ರೆನ್‌ಗೆ ತುತ್ತಾಗುತ್ತಿದ್ದಾರೆ.

ಉದ್ಯೋಗದ ಒತ್ತಡವು ಯುವ ಜನರಲ್ಲಿ ಹೃದ್ರೋಗವಾಗಲು ನೇರ ಕಾರಣವಾಗಿದೆ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಹಿರಿಯ ಹೃದಯ ತಜ್ಞರಾದ ಡಾ. ಸಂಜಯ್ ಭಟ್ ಅವರು ಹೇಳುತ್ತಾರೆ. ಕೆಲಸದ ಒತ್ತಡದೊಂದಿಗೆ ಅಸಹಜ ಸಾಮಾಜಿಕ ಜಾಲತಾಣದ ಬಳಕೆಯೂ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಿದ್ದಾರೆ.

“ಹಿಂದೆ ಜನರು ಸಾಮಾನ್ಯವಾಗಿ ಬೆರೆಯುತ್ತಿದ್ದರು ಮತ್ತು ತಮ್ಮ ತಮ್ಮ ಚಿಂತೆಗಳನ್ನು ಹಂಚುತ್ತಿದ್ದರು. ಈಗ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿ, ಜನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಕಳೆದ ದಶಕದಲ್ಲಿ ಕಂಡು ಬಂದ ಈ ಬೆಳವಣಿಗೆಯಿಂದ ಆತ್ಮಹತ್ಯೆಗಳ ಸಂಖ್ಯೆಯೂ ಏರಿದೆ!” ಎಂದು AIIMSನ ಮಾನಸಿಕ ವೈದ್ಯ ಡಾ. ಶರ್ಮ ಅವರು ಹೇಳುತ್ತಾರೆ.

ಹೃದಯಾಘಾತಕ್ಕೆ ಬಲಿಯಾಗಲು ಕೆಲವು ಮುಖ್ಯ ಕಾರಣಗಳು ಹೀಗಿವೆ:

-ತಮ್ಮ ಬದುಕಿನೊಂದಿಗೆ ಇರುವ ಅಸಮಾಧಾನ. ಅಸಮಾಧಾನ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಾಬೀತಾಗಿದೆ.

-ಹೆತ್ತವರ ಅಥವಾ ಹೆಂಡತಿಯ ಅವಾಸ್ತವಿಕ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲಗೊಳ್ಳುವುದು ಸಹ ಇನ್ನೊಂದು ಕಾರಣವಾಗಿದೆ.

-ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲವಾಗುವುದು ಸಹ ಒಂದು ಕಾರಣವಾಗಿದೆ; ಅದರಲ್ಲಿ ವೈಯಕ್ತಿಕ-ವೃತ್ತಿಪರ ಬದುಕನ್ನು ಸಮತೋಲನವಾಗಿಸುವುದು ಸೇರಿದೆ.

-ಅತೀಯಾದ ಸಾಮಾಜಿಕ ಜಾಲತಾಣಗಳ ಬಳಕೆಯೂ ಸಹ ಹೃದ್ರೋಗಕ್ಕೆ ಕಾರಣವಾಗಿದೆ.

-ಕಡಿಮೆ ಅವಧಿಯಲ್ಲಿ ಅನಿರೀಕ್ಷಿತವನ್ನು ಸಾಧಿಸುವ ಛಲವೂ ಸಹ ಒತ್ತಡಗಳಿಗೆ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗಿದೆ.

ಹೃದಯ ತಜ್ಞರು ಹೃದಯಾಘಾತದಿಂದ ಸಾವನ್ನು ತಪ್ಪಿಸಿ ಕೊಳ್ಳಲು ಕೆಲವು ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ…:
-ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಾರಾತ್ಮಕ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸುವುದರಿಂದ ನಾವು ಹೃದಯಾ ಘಾತವನ್ನು ತಪ್ಪಿಸಬಹುದು.

-ಪ್ರತಿದಿನ ಕನಿಷ್ಠ ಮೂವತ್ತು ನಿಮಿಷಗಳ ಕಾಲ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಬಹುದು; ಬೆಳಿಗ್ಗೆ ವೇಗವಾಗಿ ನಡೆಯುವುದು ಸಹ ಉತ್ತಮ.

-ಆರೋಗ್ಯಕರ ಆಹಾರ ಮತ್ತು ಶುದ್ಧ ಗಾಳಿಯನ್ನು ಉಸಿರಾಡುವುದರಿಂದಲೂ ಅನಿರೀಕ್ಷಿತ ಸಾವನ್ನು ತಪ್ಪಿಸಬಹುದು.

-ಒಳ್ಳೆಯ ಮಿತ್ರ ವೃಂದದವರೊಂದಿಗೆ ಸಮಯ ಕಳೆಯುವುದು ಸಹ ಒತ್ತಡವನ್ನು ನಿಭಾಯಿಸಲು ಸಹಾಯಕವಾಗಿದೆ.
-ಪ್ರತಿ ರಾತ್ರಿ, ಒಳ್ಳೆಯ ನಿದ್ರೆಯೂ ಸಹ ಹೃದ್ರೋಗಕ್ಕೆ ಔಷಧಿಯಾಗಿದೆ.

[ಮೂಲ: Indian Express]